ನಮ್ಮ ಜೀವನದ ಅನೇಕ ವಿಷಯಗಳನ್ನು ನಾವು ಲಘುವಾಗಿ ಪರಿಗಣಿಸುತ್ತೇವೆ. ಆದರೆ ಸಂಜೀವ್ ಸೇನ್‌ರಂತಹ ವ್ಯಕ್ತಿಗಳು ಪ್ರತಿ ವಿಷಯವನ್ನೂ ಒಂದು ದೃಷ್ಟಿಕೋನವಾಗಿ ಪರಿಗಣಿಸುತ್ತಾರೆ.
ಸಂಜೀವ್ ಸೇನ್ ವಿಕಲಚೇತನ ವ್ಯಕ್ತಿ. ಅವರಿಗೆ ನಡೆದಾಡಲು ಕಾಲುಗಳೇ ಇಲ್ಲ. ಆದರೆ ಈ ನ್ಯೂನ್ಯತೆ ಅವರನ್ನು ಅವರ ಶಿಕ್ಷಕನಾಗುವ ಆಸೆಗೆ ಎಂದೂ ಅಡ್ಡಿ ಬರಲಿಲ್ಲ. 2009ರಿಂದ ರಾಜಸ್ಥಾನದ ಶಿಕ್ಷಾ ಸಂಬಲ್ ಯೋಜನೆಯಡಿ ಇವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ.
ಶಿಕ್ಷಾ ಸಂಬಲ್ ಎಂದರೆ ಹಣಕಾಸು ಕಾರಣಕ್ಕೆ ಅಥವಾ ಇನ್ನಿತರ ಕಾರಣಕ್ಕೆ ಶಾಲೆ ಬಿಟ್ಟು ಹೋದ ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವುದು. ಇಂತಹ ಯೋಜನೆಯಡಿ ಸೇನ್ ಸೇವೆ ಸಲ್ಲಿಸುತ್ತಿದ್ದಾರೆ.
ಅವರಿಗೆ ಶಾಲೆಯಲ್ಲಿ ವಿಶೇಷವಾಗಿ ಯಾವ ಸವಲತ್ತನ್ನೂ ಒದಗಿಸಿಕೊಡಲಾಗಿಲ್ಲ, ನೆಲದಲ್ಲೇ ಕೂತು ಅವರು ಪಾಠ ಹೇಳಿಕೊಡುತ್ತಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲಾ ಕಡೆಯಿಂದ ಅವರಿಗೆ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.