ನವದೆಹಲಿ: ಭಾರತ ಮತ್ತು ಆಫ್ರಿಕಾದ ನಡುವೆ ಇ-ವಿದ್ಯಾಭಾರತಿ ಮತ್ತು ಇ-ಆರೋಗ್ಯಭಾರತಿ(E-VBAB)ನೆಟ್ವರ್ಕ್ ಪ್ರಾಜೆಕ್ಟ್ ಅನುಷ್ಠಾನಗೊಳಿಸುವ ಸಲುವಾಗಿ ವಿದೇಶಾಂಗ ಸಚಿವಾಲಯ ಮತ್ತು ಟೆಲಿಕಮ್ಯೂನಿಕೇಶನ್ ಕನ್ಸಲ್ಟೆನ್ಸ್ ಇಂಡಿಯಾ ಲಿಮಿಟೆಡ್ ನಡುವೆ ಒಪ್ಪಂದ ಏರ್ಪಟ್ಟಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಪ್ರಾಜೆಕ್ಟ್ನ್ನು, ಭಾರತ ಮತ್ತು ಆಫ್ರಿಕಾ ನಡುವಣ ಜ್ಞಾನ ಮತ್ತು ಆರೋಗ್ಯಗಳ ಡಿಜಿಟಲ್ ಸೇತುವೆ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಭಾರತ ತನ್ನ ವಿದೇಶಾಂಗ ನೀತಿಗಳ ಆದ್ಯತೆಯಲ್ಲಿ ಆಫ್ರಿಕಾಗೆ ಉನ್ನತ ಸ್ಥಾನ ನೀಡಿದೆ ಎಂದಿದ್ದಾರೆ.
ಆಫ್ರಿಕಾ ಪಾಲುದಾರ ರಾಷ್ಟ್ರಗಳಿಗೂ ಈ ಪ್ರಾಜೆಕ್ಟ್ನ್ನು ಹಂಚಿಕೊಂಡು, ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುವಂತೆ ಮಾಡುವಂತೆ ಕರೆ ನೀಡಿದ್ದಾರೆ.
E-VBAB ನೆಟ್ವರ್ಕ್ ಪ್ರಾಜೆಕ್ಟ್, 2009ರಿಂದ 2017ರವರೆಗೆ ಅನುಷ್ಠಾನದಲ್ಲಿದ್ದ, 42 ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿದ್ದ ಪಾನ್-ಆಫ್ರಿಕನ್ ಇನೆಟ್ವರ್ಕ್ ಪ್ರಾಜೆಕ್ಟ್ನ(ಮೊದಲ ಹಂತ)ದ ತಾಂತ್ರಿಕ ಸುಧಾರಣೆ ಮತ್ತು ವಿಸ್ತರಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.