ನವದೆಹಲಿ: ಭಾರತದ ಸಹಕಾರದೊಂದಿಗೆ ಬಾಂಗ್ಲಾದೇಶದಲ್ಲಿ ಆರಂಭಿಸಲಾದ 3 ಮಹತ್ವಪೂರ್ಣ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಮಂಗಳವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ಚಾಲನೆ ನೀಡಿದರು.
ಪ್ರಸ್ತುತ ಇರುವ ಭೆರಮರ(ಬಾಂಗ್ಲಾದೇಶ)-ಬಹರಮ್ಪುರ(ಭಾರತ) ಇಂಟರ್ಕನೆಕ್ಷನ್ ಮೂಲಕ ಬಾಂಗ್ಲಾಗೆ 500 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಪೂರೈಕೆ, ಅಖೌರ-ಅಗರ್ತಾಲ ರೈಲ್ ಲಿಂಕ್ ಮತ್ತು ಬಾಂಗ್ಲಾದೇಶ ರೈಲ್ವೇ ಕುಲೌರ-ಶಹಬಝ್ಪುರ ಸೆಕ್ಷನ್ನ ಪುನರ್ವಸತಿ, ಈ ಮೂರು ಯೋಜನೆಗಳಿಗೆ ಮೋದಿ ಮತ್ತು ಹಸೀನಾ ಜಂಟಿಯಾಗಿ ಚಾಲನೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಮೋದಿ, ನೆರೆಹೊರೆಯ ರಾಷ್ಟ್ರಗಳು ನೆರೆಹೊರೆಯವರಂತಹ ಸಂಬಂಧವನ್ನು ಹೊಂದಿರಬೇಕೇ ಹೊರತು ಶಿಷ್ಟಾಚಾರಗಳಿಗೆ ಕಟ್ಟು ಬೀಳಬಾರದು ಎಂದರು.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತ್ರಿಪುರಾ ಸಿಎಂ ಬಿಪ್ಲವ್ ದೇಬ್ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.