ನವದೆಹಲಿ : 2022ರ ವೇಳೆಗೆ ನವಭಾರತ ಉದಯಿಸಲಿದ್ದು , ಅದು ಬಡತನ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿರಲಿದೆ ಎಂಬ ನಿರ್ಣಯವನ್ನು ಬಿಜೆಪಿ ಭಾನುವಾರ ಅಂಗೀಕರಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲೇ ಅಭಿವೃದ್ಧಿ ಕಾರ್ಯಗಳು ನಡೆದಿದ್ದು 2022ರ ವೇಳೆಗೆ ನವಭಾರತ ಸೃಷ್ಠಿಯಾಗಲಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ನಿರ್ಣಯಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಚಿವ ರವಿಶಂಕರ ಪ್ರಸಾದ್ ಅವರು ಪ್ರತಿಪಕ್ಷಗಳು ಸರ್ಕಾರದ ಸಾಧನೆಯ ಬಗ್ಗೆ ವಿಚಲಿತಗೊಂಡಿವೆ, ಪ್ರತಿಪಕ್ಷಗಳಿಗೆ ನಾಯಕನು ಇಲ್ಲ, ನೀತಿಗಳು ಇಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅತ್ಯಂತ ಜನಪ್ರೀಯ ನಾಯಕನಾಗಿದ್ದು ನಾಲ್ಕು ವರ್ಷಗಳ ಆಡಳಿತದ ಬಳಿಕವೂ ಶೇ.70ಕ್ಕಿಂತಲೂ ಹೆಚ್ಚು ಸಕಾರಾತ್ಮಕ ರೇಟಿಂಗ್ಸ್ನ್ನು ಅವರು ಹೊಂದಿದ್ದಾರೆ ಎಂದರು. 2019ರ ಚುನಾವಣೆಯಲ್ಲೂ ಅತ್ಯಧಿಕ ಬಹುಮತವನ್ನು ಗಳಿಸಿ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆಯನ್ನು ಏರಲಿದೆ ಎಂಬ ವಿಸ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.