ನವದೆಹಲಿ: ನೌಕಾಪಡೆಯನ್ನು ಸೇರಲಿಚ್ಚಿಸುವ ಮಹಿಳೆಯರಿಗೆ ನೌಕಾಸೇನೆಯು ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ ಎಂದು ಐಎನ್ಎಸ್ವಿ ತಾರಿಣಿ ಮೂಲಕ ವಿಶ್ವ ನೌಕಾಯಾನ ನಡೆಸಿದ ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಮ್ವಾಲ್ ಹೇಳಿದ್ದಾರೆ.
ನೌಕಾಸೇನೆಯು ಮಹಿಳೆಯರಿಗಾಗಿ ಹಲವಾರು ಪ್ರಗತಿಪರ ಕಾರ್ಯಗಳನ್ನು ಆಯೋಜನೆಗೊಳಿಸುತ್ತಿದೆ. ಇದರಿಂದ ಮಹಿಳೆಯರ ವಿಶ್ವಾಸ ವೃದ್ಧಿಯಾಗುತ್ತದೆ ಮಹಿಳಾ ಸಬಲೀಕರಣ ನಡೆಯುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಐಎನ್ಎಸ್ವಿ ತಾರಿಣಿ ಮೂಲಕ ವಿಶ್ವ ನೌಕಾಯಾನ ನಡೆಸಿದ್ದರಿಂದ ನಾವು ಆದ್ಭುತವಾದ ಅನುಭವವನ್ನು ಪಡೆದೆವು. ಜನರಿಗೆ ಹಲವಾರು ವಿಷಯಗಳಲ್ಲಿ ಪ್ರೇರಣೆಯನ್ನು ನೀಡಿದೆವು , ಮಾತ್ರವಲ್ಲ ಮುಖ್ಯವಾಗಿ ಮಹಿಳೆಯರಿಗೆ ನೌಕೆ ಮತ್ತು ಅದರಲ್ಲಿನ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟೆವು ಎಂದು ಅವರು ಹೇಳಿದ್ದಾರೆ.
ಮಹಿಳೆಯರಿಗೆ ನೌಕಾಸೇನೆಯ ಬಗ್ಗೆ ಅದರಲ್ಲಿರುವ ಅವಕಾಶಗಳ ಬಗ್ಗೆ ಅರಿವಿಲ್ಲದ ಕಾರಣ ನೌಕಾಸೇನೆ ಸೇರಲು ಹಿಂಜರಿಯುತ್ತಿದ್ದಾರೆ. ಅದರ ಒಳ್ಳೆಯ ಮಾಹಿತಿ ಮತ್ತು ಅದರಲ್ಲಿರುವ ಅವಕಾಶಗಳ ಬಗ್ಗೆ ಅರಿವು ಮೂಡಿಸಿದರೆ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ನೌಕಾಸೇನೆಯನ್ನು ಸೇರುತ್ತಾರೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಹೆಚ್ಚು ಹೆಚ್ಚು ಮಹಿಳೆಯರು ನೌಕಾಸೇನೆಯನ್ನು ಸೇರಬೇಕು ಎಂಬುವುದು ವಿಶ್ವ ನೌಕಾಯಾನ ನಡೆಸಿದ ಮಹಿಳಾ ತಂಡದ ಆಶಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.