ನವದೆಹಲಿ : ಕಳೆದ 5 ವರ್ಷಗಳಿಂದ ರೈಲ್ವೆ ಅಪಘಾತಗಳಲ್ಲಿ ಗಣನೀಯವಾಗಿ ಅಂದರೆ ಶೇ. 93 ರಷ್ಟು ಕಡಿಮೆ ಆಗಿದೆ. ರೈಲ್ವೆ ಸಚಿವಾಲಯ ತೆಗೆದುಕೊಳ್ಳುತ್ತಿರುವ ಸುರಕ್ಷಿತ ಕಾರ್ಯಗಳು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಸೆಪ್ಟೆಂಬರ್ 2017 ರಿಂದ 2018 ರ ಆಗಸ್ಟ್ ವರೆಗೆ ದೇಶದಲ್ಲಿ 75 ರೈಲು ಅಪಘಾತಗಳು ಸಂಭವಿಸಿದ್ದು, ಇದರಿಂದಾಗಿ 40 ಪ್ರಯಾಣಿಕರು ಸಾವನ್ನಪ್ಪಿದ್ದರು. 2013-14 ರಲ್ಲಿ 139 ರೈಲು ಅಪಘಾತಗಳು ಸಂಭವಿಸಿದ್ದು 275 ಮಂದಿ ಸಾವಿಗೀಡಾಗಿದ್ದರು. 2014-15 ರಲ್ಲಿ 108 ರೈಲು ಅಪಘಾತಗಳು ಸಂಭವಿಸಿದ್ದು, 196 ಮಂದಿ ಮೃತಪಟ್ಟಿದ್ದರು. 2015-16 ರಲ್ಲಿ 23 ರೈಲು ಅಪಘಾತಗಳು ಸಂಭವಿಸಿದ್ದು ಇದರಿಂದಾಗಿ 107 ಮಂದಿ ಅಸುನೀಗಿದ್ದರು. 2016-17 ರಲ್ಲಿ 80 ರೈಲು ಅಪಘಾತಗಳು ಸಂಭವಿಸಿದ್ದು 249 ಮಂದಿ ಅಸುನೀಗಿದ್ದರು.
ಅಪಘಾತಗಳ ಸಂಖ್ಯೆ 2017 ರಿಂದ 18 ರಲ್ಲಿ 75 ಕ್ಕೆ ಇಳಿಮುಖವಾಗಿದ್ದು ಕೇವಲ 40 ಮಂದಿ ಸಾವನ್ನಪ್ಪಿದ್ದಾರೆ.
2020 ರೊಳಗೆ ದೇಶದಲ್ಲಿ ಮಾನವರಹಿತ ಕ್ರಾಸಿಂಗ್ನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗುವುದೆಂದು ರೈಲ್ವೆ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.