ನವದೆಹಲಿ: ದೆಹಲಿ ದೇಶದಲ್ಲೇ ಅತ್ಯಂತ ಮಾಲಿನ್ಯಯುಕ್ತ ನಗರ. ಇಲ್ಲಿನ ಕೈಗಾರಿಕೆಗಳಿಂದ, ವಾಹನಗಳಿಂದ ಹೊರಡುವ ದಟ್ಟ ಹೊಗೆ ಜನರ ಜೀವನವನ್ನೇ ದುಃಸ್ಥಿತಿಗೆ ತಂದಿತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ ಇಲ್ಲಿ ವಾಯುಮಾಲಿನ್ಯ ಮನೆಯಿಂದ ಹೊರಗೆ ಕಾಲಿಡುವುದು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ.
ಏರುತ್ತಿರುವ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ದೆಹಲಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಲ್ಲಿ ಮಳೆಗಾಲದಲ್ಲಿ ಗಿಡ ನೆಡುವುದು ಕೂಡ ಒಂದು. ಈ ಕಾರ್ಯಕ್ರಮದಡಿ ಈ ಬಾರಿ 5 ಲಕ್ಷ ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ.
ಯಮುನಾ ನದಿ ತೀರದಲ್ಲಿ ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಮೆಗಾ ಪ್ಲಾಂಟೇಶನ್ಗೆ ಚಾಲನೆಯನ್ನು ನೀಡಿದ್ದಾರೆ.
ಈ ಕಾರ್ಯಕ್ರಮದಡಿ ರಾಜಧಾನಿಯ 600 ಕಡೆಗಳಲ್ಲಿ 5 ಲಕ್ಷ ಗಿಡಗಳನ್ನು ನೆಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.