ನವದೆಹಲಿ: ಒಪ್ಪಂದದ ಅನ್ವಯ ಇರಾನ್ ಇನ್ನು ಒಂದು ತಿಂಗಳೊಳಗೆ ಚಾಬಹಾರ್ ಬಂದರನ್ನು ಕಾರ್ಯನಿರ್ವಹಣೆಗಾಗಿ ಭಾರತದ ಕಂಪನಿಗೆ ಹಸ್ತಾಂತರ ಮಾಡಲಿದೆ. ಈ ಬಗ್ಗೆ ಇರಾನ್ ಸಚಿವ ಅಬ್ಬಾಸ್ ಅಖೌಂಡಿ ಘೋಷಣೆ ಮಾಡಿದ್ದಾರೆ.
ನೀತಿ ಆಯೋಗ ಆಯೋಜನೆಗೊಳಿಸಿರುವ ಮೊಬಿಲಿಟಿ ಸಮಿತ್ನಲ್ಲಿ ಭಾಗವಹಿಸುವ ಸಲುವಾಗಿ ಅಬ್ಬಾಸ್ ಭಾರತಕ್ಕೆ ಆಗಮಿಸಿದ್ದಾರೆ.
ಈ ವೇಳೆ ಹೇಳಿಕೆ ನೀಡಿರುವ ಅವರು, ‘ಒಪ್ಪಂದದ ಅನ್ವಯ ಒಂದೂವರೆ ವರ್ಷಗಳ ಅವಧಿಗೆ ಭಾರತದ ಕಂಪನಿಗೆ ಚಾಬಹಾರ್ ಬಂದರನ್ನು ಹಸ್ತಾಂತರ ಮಾಡಲು ಸಜ್ಜಾಗಿದ್ದೇವೆ’ ಎಂದಿದ್ದಾರೆ.
ಭಾರತ ಪಶ್ಚಿಮ ಕರಾವಳಿಗೆ ಚಾಬಹಾರ್ ಬಂದರು ಅತ್ಯಂತ ಸುಲಭವಾಗಿ ಲಭ್ಯವಾಗಿದ್ದು, ಪಾಕಿಸ್ಥಾನದ ಗ್ವಾದರ್ ಪೋರ್ಟ್ಗೆ ದೊಡ್ಡ ಮಟ್ಟದಲ್ಲೇ ಕೌಂಟರ್ ಕೊಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.