ನವದೆಹಲಿ: ದೇಶ ಸಂಪೂರ್ಣ ಇಂಟರ್ನೆಟ್ಮಯ ಆಗುವತ್ತ ದಾಪುಗಾಲಿಡುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ 710 ರೈಲ್ವೇ ಸ್ಟೇಶನ್ಗಳಿಗೆ ವೈಫೈ ಸೌಲಭ್ಯವನ್ನು ಅಳವಡಿಸಲಾಗಿದ್ದು, ಪ್ರಯಾಣಿಕರು ಉಚಿತವಾಗಿ ಇಂಟರ್ನೆಟ್ ಸೇವೆ ಪಡೆಯುತ್ತಿದ್ದಾರೆ.
ರೈಲ್ವೇ ನಿಲ್ದಾಣಗಳಿಗೆ ಅಳವಡಿಸಿರುವ ವೈಫೈ ಸೌಲಭ್ಯಗಳು ಸ್ಪೀಡ್ ವಿಷಯದಲ್ಲಿ ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ರೈಲ್ವೇಯನ್ನು ಪೇಪರ್ಲೆಸ್ ಮಾಡುವತ್ತವೂ ದಾಪುಗಾಲಿಡಲಾಗುತ್ತಿದೆ ಎಂದಿರುವ ಅವರು, ಜಿಪಿಎಸ್ ಅಳವಡಿಕೆಗೂ ಕ್ಷಿಪ್ರಗತಿಯಲ್ಲಿದೆ. ಇದರಿಂದಾಗಿ ರೈಲುಗಳ ಚಲವಲನದ ಸಂಪೂರ್ಣ ಮಾಹಿತಿ ಪ್ರಯಾಣಿಕರಿಗೆ ಕೂತಲ್ಲಿಯೇ ಸಿಗಲಿದೆ ಎಂದಿದ್ದಾರೆ.
ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ರೈಲ್ವೇ ವಲಯ ಹೆಚ್ಚಿನ ಬೆಳವಣಿಗೆಯನ್ನು ಕಾಣಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.