ಮಹಾ ಪ್ರವಾಹಕ್ಕೆ ಸಿಲುಕಿದ ಕೇರಳದಲ್ಲಿ ಯೋಧರು, ಮೀನುಗಾರರು, ಎನ್ಡಿಆರ್ಎಫ್, ಸ್ವಯಂಸೇವಕರು, ಐಪಿಎಸ್, ಐಎಎಸ್ ಅಧಿಕಾರಿಗಳು ಜಂಟಿಯಾಗಿ ಪರಿಹಾರ ಕಾರ್ಯವನ್ನು ನಡೆಸಿದರು. ಇಲ್ಲಿ ಪ್ರತಿಯೊಬ್ಬರಿಗೂ ನಿಭಾಯಿಸಲು ಒಂದೊಂದು ಜವಾಬ್ದಾರಿ ಇತ್ತು. ಒಬ್ಬರು ಕೈಕೊಟ್ಟಿದ್ದರೂ ರಕ್ಷಣಾ ಕಾರ್ಯ, ಪರಿಹಾರ ಕಾರ್ಯಕ್ಕೆ ತೊಡಕಾಗುತಿತ್ತು. ಆದರೆ ಹಾಗಾಗದಂತೆ ಎಲ್ಲರೂ ಎಚ್ಚರವಹಿಸಿದ್ದರು.
ನೆರೆಯ ಸಂತ್ರಸ್ಥರಿಗೆ ನಾನಾ ರೀತಿಯಲ್ಲಿ ಸಹಾಯ ಮಾಡಿದವರನ್ನು ನಾವು ನೋಡಿದ್ದೇವೆ. ಅಪಾಯದಲ್ಲೂ ಹೆಲಿಕಾಪ್ಟರ್ ಇಳಿಸಿದ ಯೋಧ, ಪಾಕೆಟ್ ಹಣವನ್ನು ಸಂತ್ರಸ್ಥರಿಗೆ ನೀಡಿದಾಕೆ, ಒಂದು ತಿಂಗಳ ವೇತನವನ್ನು ದಾನ ಮಾಡಿದವರು ಇತ್ಯಾದಿ ಹಲವಾರು ಹೀರೋಗಳು ನೆರೆಯ ಸಂದರ್ಭ ಮೂಡಿ ಬಂದಿದ್ದಾರೆ.
ಇಂತಹ ನೂರಾರು ಹೀರೋಗಳ ಪೈಕಿ ಕನ್ನಣ್ ಗೋಪಿನಾಥನ್ ಕೂಡ ಒಬ್ಬರು. ದಾದ್ರಾ ಮತ್ತು ನಗರ್ ಹವೇಲಿ ಕಲೆಕ್ಟರ್ ಆದರೆ ಯಾರೂ ಗುರಿತಿಸಲ್ಪಡದ ಸ್ವಯಂಸೇವಕನಾಗಿ ಎಳೆಮರೆಕಾಯಿಯಂತೆ ಇವರು ಕೇರಳದಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ.
ಗೋಪಿನಾಥನ್ ಕೊಟ್ಟಾಯಂನವರು, ಕೇರಳ ನೆರೆಯ ಬಗ್ಗೆ ಕೇಳಿದ್ದೇ ತಡ ಅಲ್ಲಿಗೆ ದೌಡಾಯಿಸಿ ಸಾಮಾನ್ಯನಂತೆ ಜನರ ಸೇವಾಕಾರ್ಯದಲ್ಲಿ ತೊಡಗಿದರು. ಆದರೆ ತಾನೊಬ್ಬ ಐಎಎಸ್ ಅಧಿಕಾರಿ ಎಂದು ಅವರು ಎಲ್ಲೂ ಹೇಳಿಕೊಂಡಿಲ್ಲ.
ನೆರೆ ಬಂದ ಬಳಿಕ ಇವರು ಮಾಡಿದ ಮೊದಲ ಕಾರ್ಯ ದಾದ್ರಾ ಮತ್ತು ನಗರ್ ಹವೇಲಿಯ ವತಿಯಿಂದ ಇವರು ರೂ.1 ಕೋಟಿಯನ್ನು ಇವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾವಣೆ ಮಾಡಿದ್ದು, ಬಳಿಕ ಕಛೇರಿಯಿಂದ ರಜೆಯನ್ನು ಪಡೆದು ನೇರ ಪಥನಂತಿಟ್ಟಕ್ಕೆ ಬಂದಿಳಿದರು. ಅಲ್ಲಿ ಒಂದು ಶಿಬಿರದಲ್ಲಿ ಸ್ವಯಂಸೇವಕನಾಗಿ ಸೇವೆ ಮಾಡಿದರು.
ನಿರಾಶ್ರಿತರಿಗೆ ಆಹಾರ, ಬಟ್ಟೆಗಳನ್ನು ವಿತರಿಸಿದರು, ಅವರಿಗೆ ಕುಡಿಯಲು ನೀರು, ಊಟ ಪೂರೈಕೆ ಮಾಡಿದರು. ರಕ್ಷಣಾ ಕಾರ್ಯದಲ್ಲೂ ಕೈಜೋಡಿಸಿದರು. ಆದರೂ ಅವರು ಒಬ್ಬ ಐಎಎಸ್ ಅಧಿಕಾರಿ ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.