ಗುವಾಹಟಿ: ಭಾರತೀಯ ಅಥ್ಲೀಟ್ಗಳು ಏಷ್ಯನ್ ಗೇಮ್ಸ್ನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಇಂತಹ ಅಥ್ಲೀಟ್ಗಳ ಪೈಕಿ ಹಿಮಾ ದಾಸ್ ಕೂಡ ಒಬ್ಬರಾಗಿದ್ದು, ಬಂಗಾರವನ್ನು ತಂದಿತ್ತಿದ್ದಾರೆ. ಅವರ ಈ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ಅಸ್ಸಾಂ ಸರ್ಕಾರ ಅವರಿಗೆ ರೂ 1.60 ಕೋಟಿ ಪುರಸ್ಕಾರವನ್ನು ಘೋಷಣೆ ಮಾಡಿದೆ.
18ನೇ ಏಷ್ಯನ್ ಗೇಮ್ಸ್ನಲ್ಲಿ ಹಿಮಾ ದಾಸ್ ಅವರು ಒಂದು ಬಂಗಾರ, 2 ಬೆಳ್ಳಿ ಸೇರಿದಂತೆ ಒಟ್ಟು 3 ಪದಕಗಳನ್ನು ತಂದಿತ್ತಿದ್ದಾರೆ. ಅಸ್ಸಾಂ ಸರ್ಕಾರ ಇವರನ್ನು ಅಭಿನಂದಿಸಲು ಸೆ.7ರಂದು ಗುವಾಹಟಿಯಲ್ಲಿ ಅದ್ಧೂರಿ ಸಮಾರಂಭವನ್ನು ಏರ್ಪಡಿಸಿದೆ.
ಅಸ್ಸಾಂನಲ್ಲಿ ಹಿಮಾ ದಾಸ್ ಅವರನ್ನು ‘ಧಿಂಗ್ ಎಕ್ಸ್ಪ್ರೆಸ್’ ಎಂದು ಕರೆಯಲಾಗುತ್ತದೆ. ಐಎಎಎಫ್ ವರ್ಲ್ಡ್ ಅಂಡರ್-20 ಅಥ್ಲೀಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 18 ವರ್ಷದ ಈಕೆ ಬಂಗಾರ ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಾಣ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.