ರಾಯ್ಪುರ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಹೆಚ್ಚು ಭದ್ರವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಛತ್ತೀಸ್ಗಢದ ರಾಜನಂದಗಾವ್ನಲ್ಲಿ ಮಾತನಾಡಿದ ಅವರು, ‘ಮೋದಿ ನಾಯಕತ್ವದಲ್ಲಿ ದೇಶ ಸುಭದ್ರವಾಗಿ ಮತ್ತು ರಮಣ್ ಸಿಂಗ್ ನೇತೃತ್ವದಲ್ಲಿ ಛತ್ತೀಸ್ಗಢ ಅಭಿವೃದ್ಧಿಗೊಂಡಿದೆ’ ಎಂದರು.
ರಮಣ್ ಸಿಂಗ್ ನೇತೃತ್ವದ ಸರ್ಕಾರದ ಪರಿಶ್ರಮದಿಂದಾಗಿ ಛತ್ತೀಸ್ಗಢ ‘ಬಿಮಾರು’ ರಾಜ್ಯಗಳ ಪಟ್ಟಿಯಿಂದ ಹೊರಕ್ಕೆ ಬಂದಿದೆ ಎಂದರು.
ಛತ್ತೀಸ್ಗಢದ ರಚನೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕೊಡುಗೆಯನ್ನು ಸ್ಮರಿಸಿದ ಶಾ, ಅಟಲ್ ಜೀ ಕನಸಿನಂತೆ ರಮಣ್ ಸಿಂಗ್ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು.
ಅಲ್ಲದೇ ಛತ್ತೀಸ್ಗಢದಲ್ಲಿ ‘ಅಟಲ್ ವಿಕಾಸ ಯಾತ್ರೆ’ಗೂ ಅಮಿತ್ ಶಾ ಚಾಲನೆಯನ್ನು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.