ನವದೆಹಲಿ: ನಕಲಿ ಸುದ್ದಿಗಳು ಹರಿದಾಡುವುದನ್ನು ತಡೆಗಟ್ಟುವ ಸಲುವಾಗಿ ವಾಟ್ಸಾಪ್ ರೇಡಿಯೋ ಅಭಿಯಾನವನ್ನು ಆರಂಭಿಸಿದೆ. ಈಗಾಗಲೇ ಮೊದಲ ಹಂತವಾಗಿ 7 ರಾಜ್ಯಗಳಲ್ಲಿ ಈ ಅಭಿಯಾನ ನಡೆಯುತ್ತಿದೆ, ಇದೀಗ ಇವತ್ತಿನಿಂದ ಮತ್ತೆ 10 ರಾಜ್ಯಗಳಲ್ಲಿ ಈ ಅಭಿಯಾನ ವಿಸ್ತರಣೆಗೊಳ್ಳಲಿದೆ.
ಆ.29ರಂದು ಬಿಹಾರ, ಜಾರ್ಖಾಂಡ್, ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ, ಉತ್ತರಪ್ರದೇಶಗಳಲ್ಲಿ ವಾಟ್ಸಾಪ್ ರೇಡಿಯೋ ಅಭಿಯಾನವನ್ನು ಆರಂಭಿಸಿ, ಫೇಕ್ ನ್ಯೂಸ್ಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ.
ಸೆ.೫ರಿಂದ ಮಹಾರಾಷ್ಟ್ರ, ಆಂಧ್ರ, ಪಶ್ಚಿಮಬಂಗಾಳ, ಅಸ್ಸಾಂ, ತ್ರಿಪುರಾ, ಗುಜರಾತ್, ಕರ್ನಾಟಕ, ತಮಿಳುನಾಡು, ಒರಿಸ್ಸಾ ರಾಜ್ಯಗಳ 83 ರೇಡಿಯೋ ಸ್ಟೇಶನ್ಗಳಲ್ಲಿ ಫೇಕ್ ನ್ಯೂಸ್ ಬಗೆಗಿನ ಜಾಹೀರಾತನ್ನು ವಾಟ್ಸಾಸ್ ಬಿತ್ತರಿಸಲಿದೆ.
ಫೇಕ್ ನ್ಯೂಸ್ ತಡೆಗೆ ಕಡಿವಾಣ ಹಾಕುವಂತೆ ಭಾರತ ಸರ್ಕಾರ ವಾಟ್ಸಾಪ್ ಮೇಲೆ ಹೆಚ್ಚಿನ ಒತ್ತಡವನ್ನು ತರುತ್ತಿರುವ ಹಿನ್ನಲೆಯಲ್ಲಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.