ನವದೆಹಲಿ: 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ಸಾಧನೆ ಮಾಡಿರುವ ಕ್ರೀಡಾಳುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ಅಧಿಕೃತ ನಿವಾಸದಲ್ಲಿ ಸಂವಾದ ನಡೆಸಿದರು.
ಪದಕ ವಿಜೇತರನ್ನು ಅಭಿನಂದಿಸಿದ ಮೋದಿ, ಏಷ್ಯನ್ ಗೇಮ್ಸ್ನಲ್ಲಿ ಹಿಂದೆಂದಿಗಿಂತಲೂ ಅದ್ಭುತ ಪ್ರದರ್ಶನ ನೀಡಿ ಹೆಚ್ಚಿನ ಪದಕಗಳನ್ನು ತಂದಿತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕ್ರೀಡಾಳುಗಳ ಸಾಧನೆ ಭಾರತದ ಘನತೆ ಮತ್ತು ಹೆಮ್ಮೆಯನ್ನು ಹೆಚ್ಚಿಸಿದೆ ಎಂದ ಅವರು, ಜನಪ್ರಿಯತೆ ಮತ್ತು ಶ್ಲಾಘನೆಗಳು ಕ್ರೀಡಾಳುಗಳ ಗಮನವನ್ನು ವಿಚಲಿತಗೊಳಿಸಬಾರದು, ಮೈದಾನದಲ್ಲೇ ಇದ್ದು ಮತ್ತಷ್ಟು ಸಾಧನೆ ಮಾಡಲು ಪರಿಶ್ರಮಪಡಬೇಕು ಎಂದರು.
ಸಣ್ಣ ಪಟ್ಟಣಗಳಿಂದ, ಗ್ರಾಮೀಣ ಪ್ರದೇಶಗಳಿಂದ, ಬಡತನದಿಂದ ಯುವ ಪ್ರತಿಭೆಗಳು ಉದಯಿಸಿ, ಪದಕ ಗೆಲ್ಲುವುದನ್ನು ನೋಡಲು ಸಂತೋಷವಾಗುತ್ತದೆ ಎಂದ ಅವರು, ಹಳ್ಳಿಗಳಲ್ಲಿ ನಿಜವಾದ ಪ್ರತಿಭೆಗಳಿದ್ದು ಅವುಗಳು ಪೋಷಿಸುವ ಕಾರ್ಯ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.