ಚೆನ್ನೈ: ಹಿಂದೂ ಮುಖಂಡರನ್ನು ಕೊಂದು ಆ ಮೂಲಕ ಕೋಮು ಗಲಭೆಯನ್ನು ಸೃಷ್ಟಿ ಮಾಡಬೇಕು ಎಂದು ಹವಣಿಸುತ್ತಿದ್ದ ಐವರು ಮತಾಂಧರನ್ನು ಎನ್ಐಎ ಸೋಮವಾರ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಜಾಫರ್ ಸಾದಿಕ್ ಅಲಿ, ಸಲವುದ್ದೀನ್, ಇಸ್ಮಾಯಿಲ್, ಸಂಶುದ್ದೀನ್, ಆಶಿಕ್ ಎಂದು ಗುರುತಿಸಲಾಗಿದೆ. ಐದು ಮಚ್ಚು, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಇವರಿಂದ ವಶಕ್ಕೆ ಪಡೆಯಲಾಗಿದೆ.
‘ಹಿಂದೂ ಮಕ್ಕಳ್ ಕಚ್ಚಿ’ ನಾಯಕ ಅರ್ಜುನ್ ಸಂಪತ್ ಮತ್ತು ‘ಶಕ್ತಿ ಸೇನಾ’ ನಾಯಕ ಅನ್ಪು ಮಾರಿ ಎಂಬುವವರನ್ನು ಹತ್ಯೆ ಮಾಡಲು ಈ ಐವರು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಎನ್ಐಎ ಇವರನ್ನು ಬಂಧಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.