ವಾರಣಾಸಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಭಾನುವಾರ ಪ್ರಸಿದ್ಧ ಯಾತ್ರಾಸ್ಥಳ ವಾರಣಾಸಿಯ ಗಂಗಾ ನದಿಯಲ್ಲಿ 5 ಸ್ಟಾರ್ ಲಕ್ಸುರಿ ಕ್ರೂಸ್ಗೆ ಚಾಲನೆಯನ್ನು ನೀಡಿದರು.
ಡಬಲ್ ಡೆಕ್ಕರ್ 2,000 ಚದರ ಅಡಿ ಲಕ್ಸುರಿ ಕ್ರೂಸ್ ಇದಾಗಿದ್ದು, ನಾರ್ಡಿಕ್ ಕ್ರೂಸ್ ಲೈನ್ ಇದನ್ನು ನಿರ್ವಹಣೆ ಮಾಡಲಿದೆ, ಇದರಲ್ಲಿ 60 ಆಸನಗಳಿದ್ದು, ಏರ್ ಕಂಡೀಷನ್ ಹೊಂದಿರುವ ಕೆಳ ಡೆಕ್ಕರ್ಗೆ ಗಾಜನ್ನು ಅಳವಡಿಸಲಾಗಿದೆ. ಇದರಿಂದ ಗಂಗಾ ಆರತಿಯನ್ನು ಕಾಣಲು ಸಹಾಯಕವಾಗುತ್ತದೆ.
ವಾರಣಾಸಿ ಜನರು ಮತ್ತು ಪ್ರವಾಸಿಗರು ಈ ಲಕ್ಸುರಿ ಕ್ರೂಸ್ ಬಗ್ಗೆ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದು, ಈ ಭಾಗದ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.