ಮಂಗಳೂರು : ಮಹಾಮಳೆಗೆ ತತ್ತರಿಸಿರುವ ಕೇರಳದ ಸಂತ್ರಸ್ತರಿಗೆ ಮಂಗಳೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸೇವಾಭಾರತಿ ವತಿಯಿಂದ ದಿನಬಳಕೆಯ ವಸ್ತುಗಳು ಸೇರಿದಂತೆ ವಿವಿಧ ಅಗತ್ಯ ಸಾಮಗ್ರಿಗಳನ್ನು ಕೇರಳಕ್ಕೆ ಕಳುಹಿಸಲಾಯಿತು.
ದ.ಕ. ಜಿಲ್ಲೆಯ ವಿವಿಧೆಡೆಗಳಿಂದ ಆರ್.ಎಸ್.ಎಸ್. ಕಾರ್ಯಕರ್ತರು, ಸಾರ್ವಜನಿಕರು ಸಂಗ್ರಹಿಸಿದ ಸಾಮಗ್ರಿಗಳನ್ನು ಸಂಘನಿಕೇತನಕ್ಕೆ ತಂದು ನೀಡಿದ್ದನ್ನು, ಸೇವಾಭಾರತಿಯ ಕಾರ್ಯಕರ್ತರು ಅದನ್ನು ವಿಂಗಡಿಸಿ ಜೋಡಿಸಿಡುತ್ತಿದ್ದರು. ಬಟ್ಟೆ, ದಿನನಿತ್ಯದ ಅಗತ್ಯ ವಸ್ತುಗಳಾದ ಅಕ್ಕಿ, ಹಾಲು, ಎಣ್ಣೆ, ಔಷಧಿಗಳು ಸೇರಿದಂತೆ ಒಟ್ಟು ಆರು ಲೋಡ್ ಸಾಮಗ್ರಿಗಳನ್ನು ಇದುವರೆಗೆ ಸಾಗಿಸಲಾಗಿದೆ. ಸಂಘನಿಕೇತನದ ವಿಳಾಸದಲ್ಲಿ ಆನ್ಲೈನ್ ಮುಖಾಂತರವೂ ದಾನಿಗಳು ವಸ್ತುಗಳನ್ನು ಕಳುಹಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ರೀತಿ ಬಂದಂತಹ ವಸ್ತುಗಳನ್ನು ಹಾಗೂ ನೇರವಾಗಿ ತಂದುಕೊಟ್ಟ ವಸ್ತುಗಳನ್ನು ಸಂಗ್ರಹಿಸಿ ಇದೀಗ ಆರನೇ ಲೋಡ್ ಸಾಮಗ್ರಿಯನ್ನು ಕೆನರಾ ಸ್ಪ್ರಿಂಗ್ಸ್ ಅವರ ಸಹಕಾರದೊಂದಿಗೆ ಲಾರಿಗಳ ಮೂಲಕ ಕೇರಳಕ್ಕೆ ಕಳುಹಿಸಲಾಗಿದೆ.
ಆರ್.ಎಸ್.ಎಸ್. ಸಹ ಸಂಘ ಚಾಲಕ್ರಾದ ಸುನಿಲ್ ಆಚಾರ್, ಆರ್.ಎಸ್.ಎಸ್. ಪ್ರಾಂತ ಸಹ ಕಾರ್ಯವಾಹರಾದ ಪ್ರಕಾಶ್ ಪಿ.ಎಸ್., ಕೇಶವ ಸ್ಮೃತಿ ಸಂವರ್ಧನಾ ಸಮಿತಿಯ ಕಾರ್ಯದರ್ಶಿ ರಘುವೀರ್ ಕಾಮತ್, ಶಾಂತಾರಾಮ್ ಕೆ.ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.