ವಿಶ್ವದ ಎಲ್ಲ ಜರ್ನಲಿಸ್ಟ್ಗಳಿಗೂ ನಮ್ಮ ಕೆಲವು ಜರ್ನಲಿಸ್ಟ್ಗಳಿಗೂ ಒಂದು ವ್ಯತ್ಯಾಸ ಇದೆ. ಎಲ್ಲ ಕಡೆ ಜರ್ನಲಿಸ್ಟ್ಗಳು ಸುಳ್ಳು ಸುದ್ದಿ ಬರೀತಾರೆ, ಸರ್ಕಾರವನ್ನು ವಿರೋಧ ಮಾಡುತ್ತಾರೆ. ಯಾವುದೋ ರಾಜಕೀಯ ಪಕ್ಷದ ಪರ ಅನ್ನೋ ತರ ಬರೆಯುತ್ತಾರೆ. ಆದರೆ ದೇಶ ಒಡೆಯುವ ದಲ್ಲಾಳಿತನ ಮಾಡುವುದಿಲ್ಲ. ಅಮೇರಿಕಾದ ಹೆಚ್ಚಿನ ಎಲ್ಲ ಪತ್ರಿಕೆಗಳು ಅಧ್ಯಕ್ಷ ಟ್ರoಪ್ರನ್ನು ದ್ವೇಷಿಸುತ್ತವೆ. ಅವರನ್ನು ಹಂದಿ, ನಾಯಿ ಅನ್ನೋ ತರ ಬೈದು ಬರೆಯುತ್ತವೆ. ಆದರೆ ಅಮೇರಿಕಾವನ್ನು ಒಡೆಯಿರಿ ಎನ್ನುವ ಧೈರ್ಯ ಯಾರಿಗೂ ಇಲ್ಲ. ಆದರೆ ಮೋದಿಯನ್ನು ವಿರೋಧಿಸುವ ಕೆಲವು ಪತ್ರಕರ್ತರಿಗೆ ದೇಶ ಒಡೆಯಿರಿ ಎನ್ನುವಷ್ಟು ಕೊಬ್ಬಿದೆ. ದೇಶ ಒಡೆಯಿರಿ ಎನ್ನುವ JNU ನ ಕೆಲವು ಮುದುಕ ವಿದ್ಯಾರ್ಥಿಗಳ ಪರ ನಿಲ್ಲುವ ಹುಂಬತನವಿದೆ.
ಅಮೇರಿಕಾದ ನ್ಯೂಯಾರ್ಕ್ ನಗರವೋ, ಸಿಲಿಕಾನ್ ವ್ಯಾಲಿಯೋ ಹೆಚ್ಚು tax ಕಟ್ಟೋದು ನಾವು, ನಾವ್ಯಾಕೆ ವೆಸ್ಟ್ ವರ್ಜಿನಿಯಾದ ಜನರ ಹೊಟ್ಟೆ ಹೊರೆಯಬೇಕು ಅಂದಿದ್ದರೆ ಇವತ್ತು ಅಮೇರಿಕಾ ಅನ್ನೋ ರಾಷ್ಟ್ರ 50 ಹೋಳಾಗುತ್ತಿತ್ತು! ಒಂದೊಂದು ಭಾಗ ನಮ್ಮ ಭೂತನ್, ನೇಪಾಳದ ತರ ಇರುತ್ತಿತ್ತು. ಒಟ್ಟಾಗಿ ಈ 50 ರಾಜ್ಯಗಳು USA ಅನ್ನುವ ಜಗತ್ತಿನ ಸೂಪರ್ ಪವರ್! ಗ್ರೀಸ್ ಆರ್ಥಿಕವಾಗಿ ಸೊರಗಿದಾಗ ಯೂರೋಪಿಯನ್ ಒಕ್ಕೂಟದ ಎಲ್ಲ ರಾಷ್ಟ್ರಗಳು ಒಟ್ಟಾಗಿ USD 360 billion ಅಂದರೆ 25 ಲಕ್ಷ ಕೋಟಿ ಸಹಾಯ ಮಾಡಿ ಗ್ರೀಸ್ ಅನ್ನ ರಕ್ಷಣೆ ಮಾಡಿದವು. ಗ್ರೀಸ್ ಬಡವಾಯಿತು ಅಂತ ಬಿಟ್ಟಿದ್ದರೆ ಇವತ್ತು ಯೂರೋಪ್ 28 ಹೋಳಾಗುತ್ತಿತ್ತು! ಇವರಿಗೆಲ್ಲ ಗೊತ್ತಿದೆ, ಒಗ್ಗಟ್ಟಿನಲ್ಲಿ ಬಲವಿದೆ ಅಂತ. ಆದರೆ ನಮ್ಮಲ್ಲಿ ಮೋದಿ ಎಂದರೆ ಮೈಕೈ ಉರಿಸಿಕೊಳ್ಳುವ 2 ಪೈಸೆಯ ಕೆಲವು ಪತ್ರಕರ್ತರಿಗೆ ಬುದ್ದಿ ಮಂದ ಅಷ್ಟೇ!
ಈ ಪತ್ರಿಕೆಗಳಿಗೆ ಉತ್ತರ ಪ್ರದೇಶ ರಾಜ್ಯ (ಯೋಗಿ ಮುಖ್ಯಮಂತ್ರಿ ಆದ ನಂತರ) ದಕ್ಷಿಣದ ರಾಜ್ಯಗಳಿಗೆ ಹೊರೆ ಅಂತೆ. ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ UP ಗೆ ಸಿಗುತ್ತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಅನ್ನೋ ತರ ಬರೆಯುವ ಹುಚ್ಚು. 20 ಕೋಟಿ ಜನರಿರುವ ಅದರಲ್ಲೂ ಹೆಚ್ಚಿನವರು ಬಡವರಿರುವ UPಗೂ 3 ಕೋಟಿ ಜನರಿರುವ NRI ಕೋಟೆ ಕೇರಳಕ್ಕೂ ಸಮಾನ ಅನುದಾನ ಸಿಗಬೇಕು ಅನ್ನುವವರ ವಾದ ನನಗೆ ಅರ್ಥವಾಗುತ್ತಿಲ್ಲ! ದಕ್ಷಿಣ ರಾಜ್ಯಗಳು ಶ್ರೀಮಂತ ರಾಜ್ಯಗಳು ಉತ್ತರದ ರಾಜ್ಯಗಳು ಬಡವರು ಎನ್ನುವವರು ಯಾಕೆ ಹೀಗೆ ಅಂತ ಹೇಳಲ್ಲ. ಜಗತ್ತಿನೆಲ್ಲೆಡೆ ಸಮುದ್ರ ತಟದ ಪ್ರದೇಶಗಳು ಸಮೃದ್ಧವಾಗಿವೆ. ಇವುಗಳಿಗೆ ಸಮುದ್ರ ರಾಜ ತನ್ನದೇ ಆದ ವಾಣಿಜ್ಯ ಅವಕಾಶ ಕಲ್ಪಿಸಿಕೊಟ್ಟಿದ್ದಾನೆ. ನಮ್ಮ ದೇಶದಲ್ಲೂ ಅಷ್ಟೇ. ಬೆಂಗಳೂರಿನ ಸಾಫ್ಟ್ವೇರ್ ಕೋಟೆ, ಕೇರಳ ಗಲ್ಫ್ ದುಡಿಮೆ ಜೊತೆಗೆ ಆಂಧ್ರದಿಂದ ಹಿಡಿದು ನಮ್ಮ ಮಂಗಳೂರಿನ ತನಕ ಇರೋ ಕಡಲು ಈ ಸಿರಿವಂತಿಕೆಯ ಗುಟ್ಟು. ಇದಕ್ಕೆ ತದ್ವಿರುದ್ಧವಾಗಿ ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ಹೇರಳ ಜನ ಸಂಖ್ಯೆ, ಕೃಷಿಯನ್ನೇ ಪ್ರಧಾನವಾಗಿ ನಂಬಿಕೊಂಡಿರುವ ಸಮಾಜ, ರಾಜಕಾರಣಿಗಳ ಭ್ರಷ್ಟತನ ಬಡತನ ಸೃಷ್ಟಿಸಿದೆ. ಈ ಬಡತನ ನೀಗಲು ಯು.ಪಿ.ಗೆ ಕೇಂದ್ರದಿಂದ ಸ್ವಲ್ಪ ನೆರವು ಬಂದರೆ ಯೋಗಿ ಅದಿತ್ಯನಾಥರ ಪರ್ಸನಲ್ ಅಕೌಂಟ್ಗೆ ಹಣ ಹಾಕಿದಂತೆ ಅನ್ನಿಸುತ್ತದೆ ಕೆಲವು ಕೇಸರಿ ದ್ವೇಷಿ ಪತ್ರಿಕೆಗಳಿಗೆ. ಇನ್ನೊಂದು ವಿಪರ್ಯಾಸ ನೋಡಿ. ನಾವು ಕಾರ್ಲ್ಮಾರ್ಕ್ಸ್ ತುಂಡು ಎನ್ನುವ ಕೆಲವು ಪತ್ರಕರ್ತರು UP, ಬಿಹಾರದ ಬಡವರು ನಮಗೆ ಬೇಡ ಎನ್ನುವಾಗ ಕಮ್ಯುನಿಸ್ಟ್ರ ಡೋಂಗಿತನಕ್ಕೆ ದೊಡ್ಡ ಕನ್ನಡಿ ಹಿಡಿತಾರೆ.
UP, ಬಿಹಾರದ ಬಡ ರಾಜ್ಯಗಳು ಬೇಡ ಎನ್ನುವ ಡೋಂಗಿಗಳಿಗೆ ಸಲೂನ್ನಲ್ಲಿ ಕೂತು ಮಸಾಜ್ ಮಾಡಿಸಿಕೊಳ್ಳುವಾಗ UP ಹುಡುಗ ಮಾಡಿದ್ದು ಗೊತ್ತಾಗಲ್ಲ, ಮಹಾರಾಷ್ಟ್ರದ ರೋಡಿನಲ್ಲಿ AC ಕಾರ್ನಲ್ಲಿ ಜುಮ್ ಹೋಗುವಾಗ ಕಾರ್ ಓಡಿಸ್ತಿರೋರು ಬಿಹಾರಿ ಆದ್ರು ಅಡ್ಡಿಯಿಲ್ಲ. ನಮ್ಮಲ್ಲಿ ಇವತ್ತು ನದಿಯಲ್ಲಿ ಮುಳುಗಿ ಮರಳು ತೆಗೆಯೋದ್ರಿಂದ ಹಿಡಿದು ತೆಂಗಿನ ಕಟ್ಟೆ ಬುಡ ಮಾಡ್ತಾ ಇರೋರು ಈ UP ಇಂದ ಬಂದ ಕರ್ಮ ಯೋಗಿಗಳು. ಇದಕ್ಕೆಲ್ಲ ಬೇಡ ಎನ್ನಲಿ ನೋಡೋಣ. ಒಂದರ್ಥದಲ್ಲಿ ಗಲ್ಫ್ ಮರುಭೂಮಿಯಲ್ಲಿ ಅರಮನೆ ಕಟ್ಟಿದ ಕೇರಳಿಗರ ತರ ನಮ್ಮಲ್ಲಿ ಬಂದು ಶ್ರಮಿಸುತ್ತಿದ್ದಾರೆ ಇದೇ ಬಡವರು ಎಂದು ಜರಿಸಿಕೊಳ್ಳುವ UP, ಬಿಹಾರಿಗಳು.
ಬ್ರೇಕ್ ಇಂಡಿಯಾ ಫೋರ್ಸ್!
ಕಾರ್ಗಿಲ್ ಯುದ್ಧ ನಡೆದಾಗ ಪಾಕಿಸ್ಥಾನ ಸೋತು ಸುಣ್ಣವಾಗಿತ್ತು. ಆರ್ಥಿಕವಾಗಿ ಅಮೇರಿಕ, ಚೀನಾದಿಂದ ಬರುವ lollypop ನಂಬಿಕೊಂಡಿರುವ ದೇಶ ಯುದ್ಧದಲ್ಲಿ ಸೋತು ದಯನೀಯ ಸ್ಥಿತಿಯಲ್ಲಿರುವಾಗ ನಮ್ಮ ದೇಶದ ಅಲ್ಲಿನ ರಾಯಭಾರಿ ಪಾಕ್ನ ISI ಚೀಫ್ರನ್ನು ಭೇಟಿಯಾಗಿ ಯಾಕೆ ಸುಮ್ಮನೆ ಕಾಲು ಕೆರೆದು ಯುದ್ಧಕೆ ಬಂದು ಸೋಲುತ್ತೀರ? ಭಾರತ ತನ್ನ ಭೂಮಿಯ ಒಂದಿಂಚು ಬಿಡುವುದಿಲ್ಲ ಎಂದು ತಿಳಿದು ಈ ಯುದ್ಧ ನಷ್ಟಗಳೆಲ್ಲ ಯಾಕೆ? ನಾವು ಸ್ನೇಹದಿಂದ ಇರಬಾರದೆ ಅಂದಾಗ ಸೋತವನು ಖುಷಿ ಪಡಬೇಕಿತ್ತು. ಆದರೆ ಪಾಕಿಸ್ಥಾನದ ISI ಚೀಫ್ ಹೇಳ್ತಾರೆ – ಕಾಶ್ಮೀರ ಒಂದು ಸೈಕೋಲಾಜಿಕಲ್ ಪಾಯಿಂಟ್ ಅಷ್ಟೇ. ಒಮ್ಮೆ ಕಾಶ್ಮೀರ ಭಾರತದಿಂದ ಬೇರ್ಪಟ್ಟರೆ ಪಂಜಾಬ್, ತಮಿಳುನಾಡು, ಉತ್ತರ, ದಕ್ಷಿಣ ಅಂತ ಭಾರತ ಹೋಳಾಗುತ್ತದೆ. ಅಲ್ಲಿಯವರೆಗೆ ಸಣ್ಣ ಕಾರ್ಗಿಲ್ ಸೋಲು ನಮಗೆ ಲೆಕ್ಕಕ್ಕಿಲ್ಲ ಅಂದರಂತೆ.
ಇಂದು ಬಾಂಗ್ಲಾದೇಶಿ ವಲಸಿಗರು ನಮಗೆ ಹೊರೆ ಅಲ್ಲ, ರೋಹಿಂಗ್ಯಾಗಳು ನಮಗೆ ಹೊರೆ ಅಲ್ಲ ಎನ್ನುವ ಜನರು ಉತ್ತರ ಪ್ರದೇಶ, ಬಿಹಾರದ ಜನರು ದಕ್ಷಿಣ ಭಾರತಕ್ಕೆ ಹೊರೆ ಎಂದು ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ ಎನ್ನುವಾಗ ಇದು ಪಾಕಿಸ್ಥಾನದ ಭಾಷೆ ಎಂದು ಅರ್ಥ ಮಾಡಿಕೊಳ್ಳಲು ಹೆಚ್ಚು ಅಲೋಚಿಸಬೇಕಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.