ನರೇಂದ್ರ ಮೋದಿ ಸರಕಾರವು ಆರಂಬಿಸಿದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರೀ ಯಶಸ್ಸನ್ನು ಗಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ದೇಶಕ್ಕೆ ಮೂರು ಲಕ್ಷ ಕೋಟಿಗಳ ರೂಪಾಯಿಗಳ ವಿದೇಶೀ ವಿನಿಮಯದ ಉಳಿತಾಯವಾಗಿದೆ. ಈ ಮೊದಲು ಇಷ್ಟು ಪ್ರಮಾಣದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಆಮದಿಗೆ ಭಾರೀ ಪ್ರಮಾಣದ ಭಾರತೀಯ ಹಣವು ವಿದೇಶಕ್ಕೆ ಹೋಗುತ್ತಿತ್ತು. ಇದರ ಜೊತೆಗೆ ಲಕ್ಷಾಂತರ ಭಾರತೀಯರಿಗೆ ಉದ್ಯೋಗವೂ ದೊರಕಿದೆ.
ಸರಕಾರವು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ವಿದೇಶೀ ಪ್ರಸಿದ್ಧ ಉತ್ಪಾದಕ ಕಂಪೆನಿಗಳನ್ನು ಸರಕಾರವು ಭಾರತಕ್ಕೆ ಆಹ್ವಾನಿಸಿ ಭಾರತದಲ್ಲಿ ಉತ್ಪಾದಿಸಲು ಪ್ರೋತ್ಸಾಹವನ್ನು ಕೊಟ್ಟಿದೆ. ಇದರ ಪರಿಣಾಮವಾಗಿ ಎಲೆಕ್ಟ್ರಾನಿಕ್ ಕಂಪೆನಿಗಳು, ಮೊಬೈಲ್ ಉತ್ಪಾದನಾ ಕಂಪೆನಿಗಳು , ಅಟೋಮೊಬೈಲ್ ಉತ್ಪಾದನಾ ಕಂಪೆನಿಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ತೆರೆದಿವೆ. ವಿಶ್ವದ ಪ್ರಮುಖ ಮೊಬೈಲ್ ಉತ್ಪದನಾ ಕಂಪೆನಿಗಳಾದ ಆಪಲ್-ಐಫೋನ್, ರೆಡ್ ಮಿ-ಕ್ಸಿಯೋಮಿ, ಓಪ್ಪೋ, ವಿವೋ, ಲೆನೋವೋ, ಸೋನಿ ಮೊದಲಾದ ಕಂಪೆನಿಗಳು ಭಾರತದಲ್ಲೂ ಉತ್ಪಾದನಾ ಘಟಕಗಳನ್ನು ತೆರೆದಿವೆ.
2014 ರಲ್ಲಿ ಭಾರತದಲ್ಲಿ ಕೇವಲ 2 ಮೊಬೈಲ್ ಫೋನ್ ಉತ್ಪಾದನಾ ಘಟಕವಿದ್ದಿದ್ದು 2018 ರಲ್ಲಿ ಭಾರತದಲ್ಲಿ ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ 120 ಕ್ಕೆ ಏರಿದೆ. ಸ್ಯಾಮ್ ಸಂಗ್ ವಿಶ್ವದ ಅತೀ ದೊಡ್ಡ ಮೊಬೈಲ್ ಫೋನ್ ಉತ್ಪಾದನಾ ಘಟಕವನ್ನು ಇತ್ತೀಚೆಗೆ ಭಾರತದಲ್ಲಿ ಆರಂಭಿಸಿದೆ. ಚೀನಾದ ವಿವೋ ಮೊಬೈಲ್ ಕಂಪೆನಿಯು ಭಾರತದಲ್ಲಿ 30,000 ಚದರ ಮೀಟರ್ ವಿಸ್ತಾರದ ಉತ್ಪಾದನಾ ಘಟಕವನ್ನು ಭಾರತದಲ್ಲಿ ಆರಂಭಿಸಿದೆ. ರೆಡ್ ಮಿ ಈಗಾಗಲೇ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು ಈ ವರ್ಷ ಇನ್ನೂ ಒಂದು ಘಟಕವನ್ನು ಆರಂಭಿಸಲಿದೆ. 2017-18 ರಲ್ಲಿ 225 ಮಿಲಿಯನ್ (22.5 ಕೋಟಿ) ಮೊಬೈಲ್ ಹ್ಯಾಂಡ್ ಸೆಟ್ಗಳನ್ನು ಭಾರತದಲ್ಲಿ ಉತ್ಪಾದಿಸಲಾಗಿದೆ. ಇದು ದೇಶೀಯ ಬೇಡಿಕೆಯ 80% ವನ್ನು ಭರಿಸಿದೆ. 2018-19 ರಲ್ಲಿ ಈ ಸಂಖ್ಯೆ 290 ಮಿಲಿಯನ್ ತಲುಪಲಿದ್ದು ಇದರ ಮೊತ್ತ 1,65,000 ಕೋಟಿಗಳಾಗಲಿವೆ ಎಂದು ಅಂದಾಜಿಸಲಾಗಿದೆ.
ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ್ಡಿಯಲ್ಲಿ ಮೊಬೈಲ್ ಹ್ಯಾಂಡ್ ಸೆಟ್ ತಯಾರಿಯ ವ್ಯವಸ್ಥೆಯು ಅಗ್ರಗಣ್ಯವಾಗಿದೆ ಎಂದು ಐಸಿಇಎ ಯ ಮುಖ್ಯಸ್ಥರಾದ ಪಂಕಜ್ ಮೊಹೀಂದ್ರೋ ಹೇಳುತ್ತಾರೆ. ಮೊಬೈಲ್ ಫೋನ್ ಆಮದಿನ ಪ್ರಮಾಣ 5 ರಿಂದ 7 ಶೇಕಡಾ ಕ್ಕೆ ಕುಸಿಯಲಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.