ಕೊಚ್ಚಿ: ಕಳೆದ ಹಲವಾರು ದಿನಗಳಿಂದ ಕೇರಳ ನೆರೆ ದುರಂತದಿಂದ ಚೇತರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ದೇಶದ ಮೂಲೆ ಮೂಲೆಯ ಜನರು ಕೇರಳಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತಿದ್ದಾರೆ. ಪುಟಾಣಿ ಮಕ್ಕಳು ಕೂಡ ತಾವು ಕೂಡಿಟ್ಟ ಹಣವನ್ನು ನೆರೆ ಸಂತ್ರಸ್ಥರಿಗೆ ನೀಡಿದ್ದಾರೆ.
ತಮಿಳುನಾಡಿನ ವಿಲುಪ್ಪುರಂನ ಬಾಲಕಿಯೊಬ್ಬಳು ಸೈಕಲ್ ಖರೀದಿ ಮಾಡಬೇಕು ಎಂಬ ಆಸೆಯಲ್ಲಿ ಕೂಡಿಟ್ಟಿದ್ದ ಹಣವನ್ನು ಕೇರಳಕ್ಕೆ ನೀಡಿ ಗ್ರೇಟ್ ಎನಿಸಿಕೊಂಡಿದ್ದಾಳೆ.
ಅನುಪ್ರಿಯ ತನ್ನ 4 ವರ್ಷದ ಉಳಿತಾಯ ರೂ.9 ಸಾವಿರವನ್ನು ನೆರೆ ಪರಿಹಾರಕ್ಕೆ ನೀಡಿದ್ದಾರೆ. ಆಕೆಯ ಬಗ್ಗೆ ಇಥಿರಾಜನ್ ಶ್ರೀನಿವಾಸನ್ ಎಂಬುವವರು ಟ್ವಿಟರ್ನಲ್ಲಿ ಹಾಕಿದ್ದರು. ಬಳಿಕ ಸುದ್ದಿ ವೈರಲ್ ಆಗಿತ್ತು.
ಖ್ಯಾತ ಸೈಕಲ್ ಉತ್ಪಾದನಾ ಕಂಪನಿ ಹೀರೋ ಆಕೆಯ ವಿಷಯವನ್ನು ತಿಳಿದು, ಆಕೆಯ ವಿಳಾಸವನ್ನು ಪತ್ತೆ ಮಾಡಿ ಆಕೆಗೆ ಹೀರೋ ಸೈಕಲ್ನ್ನು ಉಡುಗೊರೆಯಾಗಿ ನೀಡಿದೆ.
ಇಲ್ಲಿ ಅನುಪ್ರಿಯ ಮತ್ತು ಹೀರೋ ಕಂಪನಿ ಇಬ್ಬರ ಶ್ರೇಷ್ಠತನವನ್ನು ನಾವು ಕೊಂಡಾಡಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.