ನವದೆಹಲಿ: ಬರಡು ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಹಸಿರು ಕ್ರಾಂತಿಯ ನೇತಾರ ಎಂದರೆ ತಪ್ಪಾಗಲಾರದು. 37 ವರ್ಷಗಳಲ್ಲಿ 5ಸುರಂಗಗಳನ್ನು ತೋಡಿ ಅವರು 700 ಗಿಡಗಳನ್ನು ಬೆಳೆಸಿದ್ದಾರೆ.
ದಕ್ಷಿಣ ಕನ್ನಡದವರಾದ ನಾಯ್ಕ್ ಎರಡು ಎಕರೆ ಬರಡು ಭೂಮಿಯನ್ನು ಇಂದು ಸಂಪೂರ್ಣ ಸಾವಯವ ತೋಟವನ್ನಾಗಿ ಪರಿವರ್ತನೆ ಮಾಡಿದ್ದಾರೆ. 300 ಅಡಿಕೆ ಮರ, 75 ತೆಂಗಿನ ಮರ, 150 ಗೇರು ಬೀಜದ ಮರ, 200 ಬಾಳೆ ಗಿಡ, ಕರಿಮೆಣಸುಗಳು ಇವರ ತೋಟದಲ್ಲಿ ಸಮೃದ್ಧವಾಗಿ ನಳನಳಿಸುತ್ತಿವೆ.
ಮಹಾಲಿಂಗ ಭಟ್ ಎಂಬುವವರಿಗೆ ಸೇರಿದ ಈ ಭೂಮಿ 40 ವರ್ಷಗಳ ಹಿಂದೆ ನೀರಿಲ್ಲದೆ ಬರಡಾಗಿತ್ತು, ಆದರೆ ಭಟ್ ಅವರ ಬಳಿ ತೋಟದ ಕೆಲಸ ಮಾಡುತ್ತಿದ್ದ ನಾಯ್ಕ್ ಅವರ ಪರಿಶ್ರಮ, ಶ್ರದ್ಧೆಯ ಫಲವಾಗಿ ಆ ಭೂಮಿ ಇಂದು ನಳನಳಿಸುತ್ತಿದೆ.
ಆ ಭೂಮಿಯಲ್ಲಿ ನಾಯ್ಕ್ಗೆ ಮನೆಕಟ್ಟಲು ಮಹಾಲಿಂಗ ಭಟ್ ಅನುಮತಿ ನೀಡಿದ್ದರು, ಆದರೆ ಅಲ್ಲಿ ನೀರಿರಲಿಲ್ಲ, ಆದರೆ ಮರು ಚಿಂತನೆ ಮಾಡದ ನಾಯ್ಕ್ ಸುರಂಗವನ್ನು ಏಕಾಂಗಿಯಾಗಿ ತೋಡಿ ದೂರದಿಂದ ಈ ಭೂಮಿಗೆ ನೀರು ಹರಿದು ಬರುವಂತೆ ಮಾಡುವ ಪ್ರಯತ್ನ ಮಾಡಿದರು. ಪತ್ನಿಯ ಸಹಕಾರ ಇವರಿಗಿತ್ತು. ಆದರೆ ಒಂದಲ್ಲ ಎರಡಲ್ಲ ನಾಲ್ಕನೇ ಸುರಂಗ ತೋಡಿದರೂ ನೀರು ಬರಲಿಲ್ಲ, ಗ್ರಾಮಸ್ಥರು ಇವರನ್ನು ಗೇಲಿ ಮಾಡಲಾರಂಭಿಸಿದರು. ಆದರೂ ಛಲ ಬಿಡದ ಅವರು ಐದನೇ ಸುರಂಗವನ್ನು 35 ಮೀಟರ್ಗಳವರೆಗೆ ತೋಡುವಾಗ ಜಲರಾಶಿ ರೂಪದಲ್ಲಿ ಬಂಗಾರವೇ ಅವರ ಕೈಗೆ ಸಿಕ್ಕಂತಾಯಿತು. ಇಂದು ಬರಗಾಲದಲ್ಲೂ ಅವರ ಮನೆ ಬಾಗಿಲಿಗೆ ಪ್ರತಿನಿತ್ಯ 6 ಸಾವಿರ ಲೀಟರ್ ಅವರ ಮನೆಗೆ ಬರುತ್ತದೆ. ಮಳೆ ನೀರು ಕೊಯ್ಲನ್ನೂ ಇವರು ಮಾಡುತ್ತಾರೆ. ಇವರ ಪ್ರಯತ್ನದ ಫಲವಾಗಿ ಇಂದು ಬರಡು ಭೂಮಿ ಹಸಿರಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.