ಬೆಳ್ತಂಗಡಿ: ಮಕ್ಕಳ ಅಪೌಷ್ಠಿಕತೆಗೆ ಬಡತನ ಮಾತ್ರ ಕಾರಣವಲ್ಲ. ಮಕ್ಕಳ ಪಾಲನೆ ಪೋಷಣೆ ಕ್ರಮ ಹಾಗೂ ಆಹಾರ ಕ್ರಮ ಅಪೌಷ್ಠಿಕತೆಗೆ ಕಾರಣ. ಇದರೊಂದಿಗೆ ಅಪೌಷ್ಠಿಕತೆಯ ಬಗೆಗಿನ ತಿಳುವಳಿಕೆಯ ಕೊರತೆ ಕೂಡಾ ಮುಖ್ಯ ಕಾರಣ. ಅಪೌಷ್ಠಿಕತೆಯ ಬಗ್ಗೆ ಜಾಗೃತಿ ಮೂಡಿಸಿ ಅಪೌಷ್ಠಿಕತೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಕ್ರಿಯವಾಗಿ ಸಹಕರಿಸಿರುವ ಬೆಳ್ತಂಗಡಿ ರೋಟರಿಯ ಸಮಾಜ ಮುಖಿ ಕೆಲಸ ಶ್ಲಾಘನೀಯ ಹಾಗೂ ಅನುಕರಣೀಯ ಎಂದು ಬೆಳ್ತಂಗಡಿ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ಶ್ರೀ.ಬಿ.ಪಿ.ಪುಟ್ಟಸ್ವಾಮಿ ತಿಳಿಸಿದರು.
ಶ್ರೀ ಪುಟ್ಟಸ್ವಾಮಿ ಅವರು ಬೆಳ್ತಂಗಡಿ ರೋಟರಿ ಕ್ಲಬ್ ಇತ್ತೀಚೆಗೆ ಬೆಳ್ತಂಗಡಿ ರೋಟರಿ ಭವನದಲ್ಲಿ ’ತಾಲೂಕಿನ ಅತಿ ಕಡಿಮೆ ತೂಕದ ಮಕ್ಕಳ ಸುಧರಣಾ ಕಾರ್ಯಕ್ರಮ’ದ ಬಗ್ಗೆ ಆಯೋಜಿಸಿದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ ಅವರು ಮಾತನಾಡುತ್ತಾ ಎಳೆಯ ಮಕ್ಕಳಲ್ಲಿರುವ ಅಪೌಷ್ಠಿಕತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕ. ತೃತೀಯ ಜಗತ್ತಿನಲ್ಲಿ ವ್ಯಾಪಕವಾಗಿರುವ ಈ ಪಿಡುಗನ್ನು ಸೇವಾ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆ ಹಾಗೂ ಜನಜಾಗೃತಿಯ ಮೂಲಕ ತೊಡೆದು ಹಾಕಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿಯ ಸದಸ್ಯರಾದ ಡಾ.ಶಶಿಕಾಂತ ಡೋಂಗ್ರೆ ಪ್ರಾರ್ಥಿಸಿ ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.