×
Home About Us Advertise With s Contact Us

ಮಂಗಳೂರು: ಶಕ್ತಿ ಶಾಲೆಯಲ್ಲಿ ಕೃಷ್ಣಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧೆಗಳ ಆಯೋಜನೆ

ಮಂಗಳೂರು: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಂಗಳೂರಿನ ಶಕ್ತಿ ನಗರದ ಶಕ್ತಿ ವಸತಿ ಶಾಲೆ, ಕಾಲೇಜು ಹಾಗೂ ಶ್ರೀ ಗೋಪಾಲಕೃಷ್ಣ ದೇಗುಲದ ಸಹಯೋಗದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಶಕ್ತಿ ವಸತಿ ಶಾಲೆಯಲ್ಲಿ ನಡೆದ ಸ್ಪರ್ಧೆಗಳಿಗೆ ಶಾಲೆಯ ಸಂಸ್ಥಾಪಕ ಮತ್ತು ಗೋಪಾಲಕೃಷ್ಣ ದೇಗುಲದ ಟ್ರಸ್ಟಿ ಕೆ.ಸಿ ನಾಯ್ಕ್ ಅವರು ಚಾಲನೆಯನ್ನು ನೀಡಿದರು.

ಈ ವೇಳೆ ಮಾತನಾಡಿದರ ಅವರು, ’ಶಕ್ತಿ ಶಾಲೆಗಳು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದ್ದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಗುರಿಯನ್ನು ಹೊಂದಿದೆ, ದೇವರ ಪ್ರೇರಣೆಯಂತೆ ಇದನ್ನು ಸ್ಥಾಪನೆ ಮಾಡಲಾಗಿದೆ’ ಎಂದರು.

ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ, ದಾಸರ ಕೀರ್ತನೆಗಳು, ಗೀತ ಕಂಠಪಾಠ, ಧ್ಯಾನ ಶ್ಲೋಕ ಸ್ಪರ್ಧೆಗಳು ಜರುಗಿದವು.

 

Recent News

Back To Top
error: Content is protected !!