ನವದೆಹಲಿ : ಆಲ್ ವುಮೆನ್ ಸ್ಪೆಶಲ್ ವೆಪನ್ಸ್ ಆಂಡ್ ಟ್ಯಾಕ್ಟಿಕ್ಸ್ ‘ಸ್ವಾಟ್’ (SWAT) ತಂಡದ ಭಾಗವಾಗಿ ದೆಹಲಿ ಪೋಲೀಸ್ ಪಡೆಗೆ 36 ಮಹಿಳಾ ಕಮಾಂಡೋಗಳು ನಿಯೋಜನೆಗೊಂಡಿದ್ದಾರೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಈ ಮಹಿಳಾ ಕಮಾಂಡೋಗಳು ಭಾಗವಹಿಸಲಿದ್ದಾರೆ.
ದೇಶದ ಪೋಲೀಸ್ ಇಲಾಖೆಯೊಂದು ಆಲ್ ವುಮೆನ್ ಸ್ವಾಟ್ ಪಡೆಯನ್ನು ಪಡೆದುಕೊಳ್ಳುತ್ತಿರುವುದು ಇದೇ ಮೊದಲು. ಸ್ವಾಟ್ ತಂಡದ ಸೇರ್ಪಡೆ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದು, ದೆಹಲಿಯ ಪ್ರಮುಖ ಭಾಗಗಳಲ್ಲಿ ಈ ಪಡೆಯ ಕಮಾಂಡೋಗಳು ನಿಯೋಜನೆಗೊಳ್ಳಲಿದ್ದಾರೆ ಎಂದಿದ್ದಾರೆ.
ಈ 36 ಮಹಿಳಾ ಕಮಾಂಡೋಗಳು 15 ತಿಂಗಳುಗಳ ಅತ್ಯಂತ ಕಠಿಣ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಎನ್ಎಸ್ಜಿ ತರಬೇತಿದಾರರು ಇವರಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ 4 ಸಾವಿರ ಪೋಲೀಸ್ ಸಿಬ್ಬಂದಿಗಳನ್ನು ದೆಹಲಿ ಪೋಲೀಸ್ ಪಡೆಗೆ ನೇಮಕಗೊಳಿಸುವ ಬಗ್ಗೆ ಪರೀಶೀಲನೆಯನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.