ಲಾಹೋರ್: 2 ದಶಕಗಳ ಹಿಂದಿನ ಕೊಲೆಗೆ ಸಂಬಂಧಿಸಿದಂತೆ ಕ್ರೈಸ್ಥ ವ್ಯಕ್ತಿಯೊಬ್ಬನನ್ನು ಪಾಕಿಸ್ಥಾನದಲ್ಲಿ ನೇಣಿಗೆ ಹಾಕಲಾಗಿದೆ. 15 ವರ್ಷದವನಿರುವಾಗಲೇ ಆತನಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾಗಿ ಒಪ್ಪುವಂತೆ ಮಾಡಲಾಗಿತ್ತು, ಇದೀಗ ನೇಣಿಗೆ ಹಾಕಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ.
ಅಫ್ತಾಬ್ ಬಹದ್ದೂರ್ ಮಸೀಹ್ ಎಂಬ ವ್ಯಕ್ತಿಯನ್ನು ಲಾಹೋರಿನ ಕೋಟ್ ಲಕ್ಪಟ್ ಜೈಲಿನಲ್ಲಿ ಬುಧವಾರ ಬೆಳಿಗ್ಗೆ ನೇಣಿಗೆ ನೀಡಲಾಗಿದೆ. ಆತ ಅಪ್ರಾಪ್ತನಾಗಿದ್ದಾಗ ಮಾಡಿದ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ನೇಣಿಗೆ ಹಾಕಲಾಗಿದೆ.
ಈತ ಈ ಪ್ರಕರಣದಲ್ಲಿ 23 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾನೆ, ಆತನಿಗೆ ನಿರಂತರ ಕಿರುಕುಳವನ್ನು ನೀಡಿ ಪೊಲೀಸರು ತಪ್ಪೊಪ್ಪಿಕೊಳ್ಳುವಂತೆ ಮಾಡಿ, ಇದೀಗ ನೇಣಿಗೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದು ನಿಜಕ್ಕೂ ಪಾಕಿಸ್ಥಾನಕ್ಕೆ ನಾಚಿಕೆಗೇಡಿನ ವಿಷಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಪಸಮುದಾಯಕ್ಕೆ ಸೆರಿದ ವ್ಯಕ್ತಿ ಎಂಬ ಕಾರಣಕ್ಕೆ ಈ ರೀತಿ ಹಿಂಸಿಸಿ ಗಲ್ಲಿಗೆ ನೀಡಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.