ಕಳೆದ 46 ವಾರಗಳಿಂದ ಮುಂಬಯಿಯ ಮಹಿಮ್ ಬೀಚ್ನ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಇಂದ್ರನಿಲ್ ಸೇನಗುಪ್ತಾ ಮತ್ತು ರಬಿಯಾ ತಿವಾರಿ ದಂಪತಿ. ಮೊದಲು ನೆರೆ ಮನೆಯ ಇಬ್ಬರೊಂದಿಗೆ ಸ್ವಚ್ಛತಾ ಕಾರ್ಯ ಆರಂಭಿಸಿದ ಈ ದಂಪತಿಗೆ ಈಗ ರಿಷಿಕುಲ್ ವಿದ್ಯಾಲಯದ 40 ವಿದ್ಯಾರ್ಥಿಗಳ ಬೆಂಬಲವೂ ಸಿಕ್ಕಿದೆ. ಇದುವರೆಗೆ ಇವರು 500 ಟನ್ಗಳಿಗಿಂತಲೂ ಅಧಿಕ ಕೊಳಚೆಯನ್ನು ತೆಗೆದಿದ್ದಾರೆ.
2017ರಲ್ಲಿ ಸೀ ಫೇಸಿಂಗ್ ಮನೆಗೆ ಶಿಫ್ಟ್ ಆದ ಈ ದಂಪತಿಗೆ ಬೀಚ್ನಲ್ಲಿನ ಕಸಗಳು ತೀವ್ರವಾಗಿ ಬಾಧಿಸಿದ್ದವು. ಅವುಗಳನ್ನು ತೆಗೆದು ಬೀಚ್ನ್ನು ಶುದ್ಧ ಮಾಡಬೇಕು ಎಂಬ ಉದ್ದೇಶದೊಂದಿಗೆ ಅವರು ಸ್ವಚ್ಛತಾ ಕಾರ್ಯಕ್ಕೆ ಧುಮುಕಿದರು. ಅವರ ಪರಿಶ್ರಮ ನಿಧಾನಕ್ಕೆ ಫಲ ನೀಡುತ್ತಿದ್ದು, ಸುತ್ತಮುತ್ತಲ ಜನರ ಮನಸ್ಥಿತಿಯಲ್ಲೂ ಬದಲಾವಣೆಯನ್ನು ತರುತ್ತಿದೆ.
ಪ್ರತಿ ವೀಕೆಂಡ್ ಬೆಳಿಗ್ಗೆ 8ರಿಂದ 10ರವರೆಗೆ ಇವರು ಸ್ವಚ್ಛತಾ ಕಾರ್ಯ ಮಾಡುತ್ತಾರೆ, ಮೊದಮೊದಲು ಅಷ್ಟಾಗಿ ಜನರ ಸಹಾಯ ಇವರಿಗೆ ದೊರೆಯುತ್ತಿರಲಿಲ್ಲ, ಆದರೆ ಈಗ ಸುತ್ತಮುತ್ತಲ ಪ್ರದೇಶದ ಜನರ, ವಿದ್ಯಾರ್ಥಿಗಳ ಬೆಂಬಲ ಇವರಿಗೆ ದೊರೆಯುತ್ತಿರುವುದು ಇವರಿಗೆ ಸಂತೋಷವನ್ನು ತಂದಿದೆ.
ಫೇಸ್ಬುಕ್ ಗ್ರೂಪ್, ವಾಟ್ಸಾಪ್ ಗ್ರೂಪ್ಗಳ ಮೂಲಕ ಇವರು ತಮ್ಮ ಸ್ವಚ್ಛತಾ ಕಾರ್ಯದ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದು, ಇದರಿಂದ ಸ್ಥಳಿಯ ಸಂಘಟನೆಗಳು, ಶಾಲೆಗಳು ಇವರ ಕಾರ್ಯಕ್ಕೆ ಕೈಜೋಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.