×
Home About Us Advertise With s Contact Us

ಗುರುಪುರ ಹೊಸ ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ 37.84  ಕೋಟಿ ರೂ. ಮಂಜೂರು

ಮಂಗಳೂರು : ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ 169 ಫಲ್ಗುಣಿ ನದಿಗೆ ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣ ಯೋಜನೆಗೆ 37.84 ಕೋಟಿ ರೂ. ಮಂಜೂರು ಮಾಡಿದೆ. ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಶಿಫಾರಸು ಮಾಡಿದ್ದರು.

ರಾಜ್ಯ ಸರ್ಕಾರ ಕಳುಹಿಸಿದ 38.07 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಪರಿಶೀಲಿಸಿದ ಕೇಂದ್ರ ಸಚಿವಾಲಯ ಅಂತಿಮವಾಗಿ 37.84 ಕೋಟಿ ರೂ.ಮೊತ್ತಕ್ಕೆ ತಾಂತ್ರಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಮಂಜೂರಾತಿ ನೀಡಿದೆ. 2018-19 ರಲ್ಲಿ 11.53 ಕೋಟಿ ರೂ.ವೆಚ್ಚದಲ್ಲಿ ಶೇ.30 ಕಾಮಗಾರಿ ಹಾಗೂ 2019-20 ರಲ್ಲಿ ಉಳಿದ ಕಾಮಗಾರಿ ಪೂರೈಸಲು ಆದೇಶಿಸಲಾಗಿದೆ.

 

Recent News

Back To Top
error: Content is protected !!