ಧೂಮಕೇತು – ಸೂರ್ಯನನ್ನು ಪರಿಭ್ರಮಿಸಿ, ಕಡೇ ಪಕ್ಷ ಒಮ್ಮೊಮ್ಮೆ ಒಂದು ವಾಯುಮಂಡಲ ಮತ್ತು ಒಂದು ಬಾಲವನ್ನು ಹೊಂದಿರುವ ಸಣ್ಣ ಕಾಯ. ಧೂಮಕೇತುವನ್ನು ಆಂಗ್ಲಭಾಷೆಯಲ್ಲಿ comet ಎನ್ನುತಾರೆ. ಧೂಮಕೇತು ಎನ್ನುವ ಪದ ಸಂಸ್ಕೃತದ್ದು. ಧೂಮಕೇತು ಸೂರ್ಯನ ಸುತ್ತ ಪರಿಭ್ರಮಿಸುವಾಗ, ದೂರದಲ್ಲಿ ಇದ್ದ ಸಮಯದಲ್ಲಿ ಅತಿಶೀತಲ ವಾಗಿ, ಇದರಲ್ಲಿ ಇರುವ ಪದಾರ್ಥಗಳು, ಆವಿ(gas)ಗಳು ಘನೀಭವಿಸಿ, ಘನಸ್ಥಿತಿಯಲ್ಲಿರುತ್ತವೆ. ಹತ್ತಿರದಲ್ಲಿ ಪರಿಭ್ರಮಿಸುವ ಸಮಯದಲ್ಲಿ, ಸೂರ್ಯನ ಬೇಗೆಯಿಂದ ಕರಗಿ ಹೋಗುತ್ತವೆ. ಒಂದು ಭಾಗದಲ್ಲಿ ತಲೆ, ಕೊನೆಯ ಭಾಗದಲ್ಲಿ ಬಾಲ(Tail)ವನ್ನು ಹೊಂದಿರುತ್ತದೆ.
ಪುರಾತನ ಭಾರತೀಯ ಖಗೋಳ ಗ್ರಂಥಗಳು ಧೂಮಕೇತುಗಳ ಜ್ಞಾನವನ್ನು ಬಹಳ ವಿಸ್ತಾರಗೊಳಿಸುತ್ತವೆ.
ಭಾರದ್ವಾಜ ಋಷಿಗಳ ಬೃಹತ್ ವಿಮಾನ ಶಾಸ್ತ್ರ, ಅಗಸ್ತ್ಯರ ಶಕ್ತಿ ತಂತ್ರ, ಜೈಮಿನಿ ಋಷಿಗಳ ಕೇತ ಸರ್ವಸ್ವದಲ್ಲಿ ಇದರ ಬಗ್ಗೆ ಉಲ್ಲೇಖಗಳಿವೆ.
ಭಾರದ್ವಾಜ ಋಷಿಗಳ ವಿಮಾನ ಶಾಸ್ತ್ರ ಕೃತಿಯಲ್ಲಿ; ಕ್ರಿಯಾಸರ ತಂತ್ರ ಎಂಬ ಅಧ್ಯಾಯದಲ್ಲಿ ಈ ರೀತಿ ಹೇಳಲಾಗಿದೆ “ಬಾಹ್ಯಾಕಾಶದಲ್ಲಿ 30730221 ಧೂಮಕೇತುಗಳಿವೆ ಎಂದು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಸುಮಾರು 8000 ವಿದ್ಯುತ್ ಪ್ರವಾಹದೊಂದಿಗೆ ಅಧಿಕಾರವನ್ನು ಹೊಂದಿವೆ. ಅವುಗಳಲ್ಲಿ ಹನ್ನೆರಡು ತುಂಬಾ ಶಕ್ತಿಶಾಲಿ ಮತ್ತು ಅಪಾಯಕಾರಿ.”
ಅಗಸ್ತ್ಯ ಋಷಿಗಳು ತಮ್ಮ ಶಕ್ತಿ ತಂತ್ರದಲ್ಲಿ ೧೨ ಧೂಮಕೇತುಗಳ ಬಗ್ಗೆ ವರ್ಣಿಸುತ್ತಾ ಈ ರೀತಿ ಹೇಳುತ್ತಾರೆ…
ಮಳೆಗಾಲದ ಸಮಯದಲ್ಲಿ ಧೂಮಕೇತುಗಳ ಶಕ್ತಿಯು ತುಂಬಾ ಹೆಚ್ಚಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ.
ವಿಮಾನ ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ: ಸೂರ್ಯನು ಅದರ ಸುತ್ತಮುತ್ತಲಿನ ಕೆಲವು ವಸ್ತುಗಳನ್ನು ಸುಡುವ ಕ್ರಿಯೆಯಿಂದ ಧೂಮಕೇತುಗಳು ರೂಪುಗೊಳ್ಳುತ್ತವೆ. ಧೂಮಕೇತುಗಳ ಕುರಿತಾದ ಆಧುನಿಕ ಜ್ಞಾನವು ಇಂದು ನಿನ್ನೆಯದಲ್ಲ ಅದು ಈ ಭೂಮಿ ಪ್ರಾರಂಭಕ್ಕೂ ಮುನ್ನವೇ ಆದ ಘಟನೆಗಳು. ನಮ್ಮ ಭಾರತೀಯ ಋಷಿಗಳು ಈ ಖಗೋಳ ವಿಸ್ಮಯವನ್ನು ಸುಮಾರು 5000 ವರ್ಷಗಳ ಹಿಂದೆ ಹೇಳಿ ಬರೆದಿಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.