ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಏಷ್ಯನ್ ಗೇಮ್ಸ್ ಬಂಗಾರದ ಪದಕ ವಿಜೇತ, ಮಾಜಿ ಅಥ್ಲೀಟ್ ಹಕಂ ಭತ್ತಲ್ ಅವರ ಚಿಕಿತ್ಸೆಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ರೂ.10 ಲಕ್ಷ ಧನ ಸಹಾಯ ಘೋಷಿಸಿದ್ದಾರೆ.
ರಾಥೋಡ್ ಅವರು ಟ್ವಿಟರ್ ಮೂಲಕ ಈ ವಿಷಯವನ್ನು ತಿಳಿಸಿದ್ದು, ಸಚಿವಾಲಯ ಮತ್ತು ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಭತ್ತಲ್ ಅವರು ಯೋಗ ಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಧ್ಯಾನ್ಚಂದ್ ಪ್ರಶಸ್ತಿ ಪುರಸ್ಕೃತ ಅಥ್ಲೀಟ್ ಆಗಿರುವ ಭತ್ತಲ್ ಅವರು, ಕಿಡ್ನಿ ಮತ್ತು ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.
6 ಸಿಖ್ ರೆಜಿಮೆಂಟ್ನಲ್ಲಿ ಹವಲ್ದಾರ್ ಆಗಿಯೂ ಸೇವೆ ಸಲ್ಲಿಸಿರುವ ಭತ್ತಲ್, 1972ರಲ್ಲಿ ಭಾರತೀಯ ಸೇನೆಯನ್ನು ಸೇರಿ ದೇಶಸೇವೆ ಮಾಡಿದ್ದಾರೆ.
I have ordered an immediate release of ₹10 lakhs for the medical treatment of Havildar Hakam Bhattal. Officers of @IndiaSports @Media_SAI have visited him, and we are keeping track of the situation. I wish him a quick recovery.
We are proud to stand by our heroes. https://t.co/9jQdURF8W0
— Rajyavardhan Rathore (@Ra_THORe) July 31, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.