ನವದೆಹಲಿ: ಶೀಘ್ರದಲ್ಲೇ ವಾಷಿಂಗ್ಟನ್ ಮತ್ತು ಮಾಸ್ಕೋಗಳ ಇಲೈಟ್ ಮಿಸೈಲ್ ಶೀಲ್ಡ್ ಕ್ಲಬ್ಗೆ ಭಾರತ ಕೂಡ ಸೇರ್ಪಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, 1 ಬಿಲಿಯನ್ ಡಾಲರ್ ವೆಚ್ಚದ ಈ ಸುಧಾರಿತ ಭದ್ರತಾ ವ್ಯವಸ್ಥೆಗೆ ಅನುಮೋದನೆಯನ್ನು ನೀಡಿದೆ.
ಭಾರತದ ಹಳೆಯ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಬದಲಾಯಿಸಬಲ್ಲ ಈ ಆಧುನಿಕ ಮಿಸೈಲ್ ಶೀಲ್ಡ್ಗೆ ಅನುಮೋದನೆ ನೀಡುವ ಮೂಲಕ ಸರ್ಕಾರ ಅತ್ಯಂತ ಮಹತ್ವಪೂರ್ಣ ತಂತ್ರಗಾರಿಕ ಹೆಜ್ಜೆಯನ್ನಿಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಮ್-11’ಗೆ ಸಮ್ಮತಿಯನ್ನು ಸೂಚಿಸಿದ್ದಾರೆ, ಈ ಮಿಸೈಲ್ ಶೀಲ್ಡ್ನ್ನು ಯುಎಸ್ನಿಂದ 1 ಬಿಲಿಯನ್ ಡಾಲರ್ಗೆ ಖರೀದಿ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.