ನವದೆಹಲಿ: ಭಾರತದ ‘ಸ್ಕಿಲ್ ಇಂಡಿಯಾ’ ತಾಂತ್ರಿಕ ಆಸಕ್ತರ ಮೊದಲ ಬ್ಯಾಚ್ ಜುಲೈ 17ರಂದು ಜಪಾನಿಗೆ ತೆರಳಿದ್ದು, ಒಸಾಕದಲ್ಲಿನ ಭಾರತೀಯ ರಾಯಭಾರ ಕಛೇರಿಯಲ್ಲಿ ಇಂದು ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು.
ಉಭಯ ದೇಶಗಳ ನಡುವಣ ಟೆಕ್ನಿಕಲ್ ಇಂಟರ್ನ್ ಟ್ರೈನಿಂಗ್ ಪ್ರೋಗ್ರಾಂನ ಮೆಮೊರಾಂಡಮ್ ಆಫ್ ಕೊಅಪರೇಶನ್ನ ಭಾಗವಾಗಿ ಇವರಿಗೆ ಜಪಾನ್ನಲ್ಲಿ ತರಬೇತಿ ಮತ್ತು ಓರಿಯಂಟೇಶನ್ ನೀಡಲಾಗುತ್ತಿದೆ. 2ರಿಂದ 3 ವರ್ಷಗಳ ಕಾಲ ಇವರು ಅಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
23ರಿಂದ 26 ವರ್ಷ ವಯಸ್ಸಿನ 12 ಮಂದಿಯ ಯುವಕರ ತಂಡ ಈ ಮೊದಲ ಬ್ಯಾಚ್ನಲ್ಲಿದ್ದು, ಇವರೆಲ್ಲಾ ಗ್ರಾಮೀಣ ತಮಿಳುನಾಡಿನ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರಾಗಿದ್ದಾರೆ.
ಅಲ್ಲಿನ ವಿವಿಧ ಕಂಪನಿಗಳಲ್ಲಿ ಇವರು 2-3 ವರ್ಷ ಕಾರ್ಯಮಾಡಿ ತಾಂತ್ರಿಕ ನೈಪುಣ್ಯತೆಯನ್ನು ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.