ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪಶ್ಚಿಮಬಂಗಾಳದ ಪಶ್ಚಿಮ್ ಮಿಡ್ನಾಪುರ್ನಲ್ಲಿ ಬಿಜೆಪಿ ಆಯೋಜನೆಗೊಳಿಸಿದ ‘ಕಿಸಾನ್ ಕಲ್ಯಾಣ್ ಸಮಾವೇಶ’ದಲ್ಲಿ ಭಾಗಿಯಾಗಿದರು.
ಈ ವೇಳೆ ಮಾತನಾಡಿದ ಅವರು, ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಮಮತಾ ಸರ್ಕಾರ ಪಶ್ಚಿಮಬಂಗಾಳ ಜನತೆಯ ಆಶಯಗಳನ್ನು ಉದ್ದೇಶಪೂರ್ವಕವಾಗಿ ಕಟ್ಟಿ ಹಾಕುತ್ತಿದೆ. ತೃಣಮೂಲ ಪಕ್ಷದ ಸ್ವಾರ್ಥ ರಾಜಕಾರಣದಿಂದಾಗಿ ಈ ರಾಜ್ಯ ನರಳುತ್ತಿದೆ’ ಎಂದರು.
ಈ ರಾಜ್ಯ ಸಂಪೂರ್ಣವಾಗಿ ಪೊಲಿಟಿಕಲ್ ಸಿಂಡಿಕೇಟ್ಗಳ ಕೈಯಲ್ಲಿದೆ, ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು. ಅಲ್ಲದೇ ಸಿಂಡಿಕೇಟ್ ರಾಜ್ಯ ಪರಂಪರೆಯನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದರು.
‘ಇಲ್ಲಿ ಬ್ಯುಸಿನೆಸ್ ಮಾಡಬೇಕಾದರೆ ಸಿಂಡಿಕೇಟ್ಗಳ ಅನುಮತಿ ಬೇಕು, ದರ ನಿಗದಿಪಡಿಸಲು ಸಿಂಡಿಕೇಟ್ ಅನುಮತಿ ಬೇಕು, ಕಾಲೇಜು ಆಡಳಿತವೂ ಅವರಲ್ಲದೆ ನಡೆಯೋದಿಲ್ಲ, ಒಟ್ಟಾರೆ ಇಲ್ಲಿನ ವ್ಯವಸ್ಥೆ ಅವರ ಅಧೀನದಲ್ಲಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.