ನಮ್ಮ ಸೂರ್ಯ ಕೇಂದ್ರಿತ ಸಿದ್ಧಾಂತದ ಬಗ್ಗೆ ನೋಡಿದಾಗ ಸೂರ್ಯ ಮಧ್ಯದಲ್ಲಿ ನಿಂತಿರುವ ಭೂಮಿ ಸೇರಿದಂತೆ ಸೋಮ ಮಂಗಳ ಬುಧ ಗುರು ಶುಕ್ರ ಶನಿ ರಾಹು ಕೇತು ನವಗ್ರಹಗಳು ಸೂರ್ಯನ ಸುತ್ತಲು ನಿಗದಿತ ಪಥದಲ್ಲಿ ತನ್ನ ಸಂಚಲನ ನಡೆಸುತ್ತದೆ ಎಂಬ ಸತ್ಯವನ್ನು ಭಾರತೀಯರು ಜಗತ್ತಿಗೆ ತಿಳಿಸಿದ್ದಾರೆ.
ಅನಾದಿಕಾಲದಿಂದಲು ನಮ್ಮ ದೇವಸ್ಥಾನಗಳಲ್ಲಿ ನವಗ್ರಹದ ಗುಡಿಯಿದ್ದು ಸೂರ್ಯನು ಮಧ್ಯದಲ್ಲಿದ್ದು ಸುತ್ತಲೂ ನವಗ್ರಹಗಳನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ. ಸೂರ್ಯ ನಮ್ಮ ಬ್ರಹ್ಮಾಂಡದ ಕೇಂದ್ರಬಿಂದು ಎಂದು ವೇದಗಳು ಸ್ಪಷ್ಟವಾಗಿ ತಿಳಿಸಿವೆ.
“ಮಿತ್ರೋದಾಧಾರ ಪೃಥ್ವಿಮ್ ಉತದ್ಯಾಮ್ ಮಿತ್ರಃ ಕ್ರಿಷ್ಟಃ,|| (ಋಗ್ವೇದ ೩:೫೯.೧)
ಸೂರ್ಯನು ತನ್ನ ಆಕರ್ಷಣ ಶಕ್ತಿಯಿಂದ ಭೂಮಿಯನ್ನು ಹಾಗು ಇತರೆ ಗ್ರಹಗಳನ್ನು ಹಿಡಿದಿರುವುದು ಎಂದು ತಿಳಿಸುತ್ತದೆ.
ತ್ರಿನಾಭಿಕಾಕ್ರಮಜರ ಮನರ್ವಮ್ ವೆನೆಮಾ ವಿಶ್ವ ಭುವನಾನಿ ತಸ್ತುಹು|| (ಋಗ್ವೇದ ೧:೧೬೪:೨)
ಎಲ್ಲಾ ಗ್ರಹಗಳು ಅಂಡಾಕಾರದ ಕಕ್ಷೆಯಲ್ಲಿ ಚಲಿಸುತ್ತವೆ ಎಂಬ ವಿಚಾರವೂ ನಮ್ಮ ಪೂರ್ವಜರಿಗೂ ತಿಳಿದಿತ್ತು.
ಶ್ರೀ ನೀಲಕಂಠ ಸೋಮಯಾಜಿ ಎಂಬ ಕೇರಳದ ಮಹಾನ್ ಗಣಿತಜ್ಞರು ಮೊದಲಿಗೆ ಇದರ ಬಗ್ಗೆ ಆಳವಾಗಿ ತಿಳಿಸಿದ್ದರು. ಆರ್ಯಭಟ ಬ್ರಹ್ಮಗುಪ್ತ ವರಾಹ ಮಿಹೀರ ಇವರುಗಳ ಪುಸ್ತಕಗಳನ್ನು ಓದಿ ತಿಳಿದು ಸೋಮಯಾಜಿರವರು ಇದರ ಬಗೆಗೆ ವಿಶ್ಲೇಷಿಸಿದ್ದರು. ಅಷ್ಟೇ ಅಲ್ಲದೇ ಅವರು ಸೂರ್ಯನಿಂದ ಗ್ರಹಗಳ ಸ್ಥಾನಗಳನ್ನು, ಮತ್ತು ಅವುಗಳ ಕಕ್ಷೆಗಳನ್ನು ಸ್ಪಷ್ಟವಾಗಿ ಚಿತ್ರಿಸಿದ್ದರು.
ನಮ್ಮ ಪಠ್ಯಗಳ ಪ್ರಕಾರ ಇದನ್ನು ಕಂಡುಹಿಡಿದದ್ದು ಕೊಪರ್ನಿಕಸ್ 1543 ರಲ್ಲಿ ಎಂದು ಉಲ್ಲೇಖವಿದೆ. ಆದರೆ ಇದರ 75 ವರ್ಷಗಳ ಹಿಂದೆಯೇ ಅಂದರೆ 1468 ರಲ್ಲಿಯೇ ನೀಲಕಂಠ ಸೋಮಯಾಜಿ ಇದನ್ನು ತಿಳಿಸಿದ್ದರು. ವಿವಿಧ ಭಾರತೀಯ ಖಗೋಳ ಶಾಸ್ತ್ರಜ್ಞರು ಹಾಗು ಜ್ಯೋತಿಷ್ಯ ತಜ್ಞರು ಗ್ರಹಗತಿಗಳ ಬಗ್ಗೆ ಆಕಾಶಕಾಯಗಳ ಬಗ್ಗೆ ಸಾಕಷ್ಟು ಮಾಹಿತಿ ತಿಳಿದಿದ್ದು ನಾಸಾ ಸೇರಿದಂತೆ ಹಲವು ಬಾಹ್ಯಾಕಾಶ ಸಂಸ್ಥೆಗಳು ಭಾರತೀಯರಿಗೆ ಇದರ ಬಗ್ಗೆ ಅಪಾರ ಜ್ಞಾನವಿತ್ತು ಎಂಬುದನ್ನು ಒಪ್ಪಿದ್ದಾರೆ.
ಈಗ ಹೇಳಿ 1468 ರಲ್ಲಿ ನೀಲಕಂಠ ಸೋಮಯಾಜಿ ಇದನ್ನು ಕಂಡುಹಿಡಿದದ್ದೋ ಅಥವ ಭಾರತೀಯರಿಂದ ಜ್ಞಾನವನ್ನು ಕದ್ದು ಹೋಗಿ ತಾನು ಮಾಡಿದ್ದು ಎಂದು ಹೇಳಿದ ಕೊಪರ್ನಿಕಸ್ ಕಂಡುಹಿಡಿದದ್ದೋ ಎಂದು.
ಹಾ! ಮರೆಯಬೇಡಿ, ಸೂರ್ಯ ಮಧ್ಯದಲ್ಲಿ ನಿಂತಿರುವನು ಭೂಮಿಯು ಅದರ ಸುತ್ತ ಸುತ್ತುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.