ಪುರಿ: ಗುಹೆಯೊಳಗೆ ಸಿಲುಕಿಕೊಂಡಿರುವ ಥಾಯ್ಲೆಂಡ್ ಬಾಲಕರ ರಕ್ಷಣೆಗೆ ಅಂತಾರಾಷ್ಟ್ರೀಯ ಸಮುದಾಯ ಒಂದಾಗಿದೆ. ಈಗಾಗಲೇ 8 ಬಾಲಕರನ್ನು ಸುರಕ್ಷಿತವಾಗಿ ಹೊರ ತರಲಾಗಿದ್ದು, ಇನ್ನೂ 5 ಮಂದಿ ಗುಹೆಯೊಳಗಿದ್ದಾರೆ. ಬೆಂಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಕ್ಷಣಾ ಕಾರ್ಯ ಕಷ್ಟದಾಯಕವಾಗಿದೆ.
ಗುಹೆಯೊಳಗೆ ಬಾಲಕರು ಸಿಲುಕಿದ್ದ ವಿಷಯ 10 ದಿನಗಳ ಬಳಿಕ ಹೊರ ಜಗತ್ತಿಗೆ ತಿಳಿಯಿತು, ಆದರೂ ಅದೃಷ್ಟವಶಾತ್ ಎಂಬಂತೆ ಎಲ್ಲಾ ಬಾಲಕರು ಬದುಕುಳಿದಿದ್ದಾರೆ. ಈ ಬಾಲಕರ ಸುರಕ್ಷತೆಗಾಗಿ ಅಂತಾರಾಷ್ಟ್ರೀಯ ಸಮುದಾಯ ಪ್ರಾರ್ಥನೆಯಲ್ಲಿ ತೊಡಗಿದೆ.
ಭಾರತದಲ್ಲೂ ಥಾಯ್ ಮಕ್ಕಳ ಸುರಕ್ಷತೆಗಾಗಿ ಪ್ರಾರ್ಥನೆಗಳು ನಡೆದಿವೆ, ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಒರಿಸ್ಸಾ ಬೀಚ್ನಲ್ಲಿ ಈ ಮಕ್ಕಳ ಸುರಕ್ಷತೆಗಾಗಿ ಪ್ರಾರ್ಥಿಸಿ ಅದ್ಬುತವಾದ ಮರಳು ಶಿಲ್ಪವನ್ನು ಬಿಡಿಸಿದ್ದಾರೆ.
ಈ ಶಿಲ್ಪದಲ್ಲಿ ‘ನಾವು ಥಾಯ್ ಬಾಲಕರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇವೆ’ ಎಂದು ಬರೆಯಲಾಗಿದೆ. ಈ ಶಿಲ್ಪಕ್ಕೆ 5ಟನ್ ಮರಳು ಬಳಸಲಾಗಿದೆ ಮತ್ತು ಇದು 4 ಅಡಿ ಎತ್ತರವಿದೆ. ಇದನ್ನು ರಚಿಸಲು ಅವರು 3 ಗಂಟೆ ತೆಗೆದುಕೊಂಡಿದ್ದಾರೆ. ಶಿಲ್ಪಕ್ಕೆ ‘ಥಾಯ್ ಕೇವ್ ರಿಸ್ಕ್ಯೂ’ ಎಂದು ಹೆಸರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.