ಗುರುತ್ವಾಕರ್ಷಣ ಶಕ್ತಿ ಕಂಡುಹಿಡಿದವರು ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ನ್ಯೂಟನ್ ಎಂದು. ನಮ್ಮ ಶಾಲಾ ಪುಸ್ತಕದಲ್ಲಿ ಇದೇ ಇದ್ದು ಶಿಕ್ಷಕರು ಇದನ್ನೇ ಹೇಳಿಕೊಟ್ಟಿರುವುದು. ಆದರೆ ಇಲ್ಲಿ ಮೂಡುವ ಆಶ್ಚರ್ಯವೆಂದರೆ ನ್ಯೂಟನ್ ಕಂಡು ಹಿಡಿಯುವ ಮುನ್ನ ಈ ಗುರುತ್ವಾಕರ್ಷಣ ಶಕ್ತಿ ಇರಲಿಲ್ಲವೇ ಎಂಬುದು. ಹಾ ನಿಜ ಹೇಳುವುದಾದರೆ ನ್ಯೂಟನ್ ತಲೆಯ ಮೇಲೆ ಸೇಬು ಬೀಳುವ ಅನೇಕ ಶತಮಾನಗಳ ಮೊದಲೇ ಅನೇಕ ಸೇಬು ಇನ್ನಿತರೇ ಹಣ್ಣು ಮರದ ಮೇಲಿಂದ ಬಿದ್ದಿದ್ದವು. ಹಾಗದರೆ ಆಗ ಈ ಸಂಗತಿ ಬೇರೆ ಯಾರಿಗೂ ಹೊಳೆದಿರಲಿಲ್ಲವೇ? ಎಂಬ ಪ್ರಶ್ನೆಗೆ ಭಾರತೀಯರು ಉತ್ತರ ನೀಡುತ್ತಾರೆ.
ಸುಮಾರು 2500 ವರ್ಷಗಳ ಹಿಂದೆ ಸೂರ್ಯ ಸಿದ್ಧಂತ ಎಂಬ ಖಗೋಳ ಶಾಸ್ತ್ರದ ಪುಸ್ತಕದಲ್ಲಿ ಗುರುತ್ವಾಕರ್ಷಣೆಯ ಬಗೆಗೆ ಉಲ್ಲೇಖವಿದೆ. “ಬಿಬ್ರಣಃ ಪರಮಾಮ್ ಶಕ್ತಿಂ ಬ್ರಹ್ಮಣೋ ಧಾರಣಾತ್ಮಿಕಂ” (ಸೂರ್ಯಸಿದ್ಧನ್ಂತ 12 ಅದ್ಯಾಯ ಶ್ಲೋಕ 32)
ಧಾರಣಾತ್ಮಕ ಶಕ್ತಿಯಿಂದಾಗಿ ಭೂಮಿಯು ಅಂತರಿಕ್ಷದಲ್ಲಿ ಸ್ಥಿರವಾಗಿ ನಿಂತಿದೆ. ಈ ಧಾರಣಾತ್ಮಕ ಶಕ್ತಿ ಎಂದರೆ ಭಾರವಾದುದನ್ನು ಹಿಡಿಯುವ ಶಕ್ತಿ ಎಂದರ್ಥ.
ಮುಂದೆ ವರಾಹ ಮಿಹಿರ ಎಂಬ ಶ್ರೇಷ್ಠ ಖಗೋಳ ಶಾಸ್ತ್ರಜ್ಞ ಈ ಧಾರಣಾತ್ಮಕ ಶಕ್ತಿ ಅಥವ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ 1500 ವರ್ಷಗಳ ಹಿಂದೆ ತನ್ನ ಪಂಚ ಸಿದ್ಧಾಂತಿಕ ಪುಸ್ತಕದಲ್ಲಿ ಈ ರೀತಿ ವಿವರಿಸುತ್ತಾರೆ.
” ಗಗನಮುಪೈತಿ ಸಿಖೀಶಿಖಾ
ಕ್ಷಿಪ್ತಮತಿ ಕ್ಷಿತಿಮುಪೈತಿ
ಗುರು ಕಿಂಚಿತ್ ಯದ್ವದಿಹ ಮಾನವಾನಾಂ
ಸುರಾಣಾಂ ತದ್ವದೇವಾಗ್ಜಃ||
(ಪಂಚ ಸಿದ್ಧಂತಿಕಾ 13ನೇ ಅಧ್ಯಾಯ 4ನೇ ಶ್ಲೋಕ)
ಭೂಮಿಯ ಎಲ್ಲಾ ಭಾಗಗಳಲ್ಲಿ ಬೆಂಕಿಯ ಜ್ವಾಲೆ ಮೇಲ್ಮುಖವಾಗಿರುತ್ತದೆ ಮತ್ತು ಮೇಲೆಸೆದ ವಸ್ತುಗಳು ಕೆಳಗೆ ಬೀಳುತ್ತವೆ ಎಂದು ಪ್ರತಿಯುಬ್ಬರ ಅನುಭವವಾಗಿದೆ. ಭಾಸ್ಕರಾಚಾರ್ಯ ಎಂಬ ಶ್ರೇಷ್ಠ ಭಾರತೀಯ ಗಣಿತ ಶಾಸ್ತ್ರಜ್ಞ ತಮ್ಮ ಲೀಲಾವತೀ ಎಂಬ ಕೃತಿಯಲ್ಲಿ ಈ ರೀತಿ ಹೇಳುತ್ತಾರೆ.
ಗ್ರಹಗಳ ನಡುವಿನ ಪರಸ್ಪರ ಆಕರ್ಷಣೆಯಿಂದ ಭೂಮಿಯು ಗುರುತ್ವಾ ಬಲವನ್ನು ಹೊಂದಿದ್ದು ಗ್ರಹಗಳು ತಮ್ಮ ಜಾಗದಲ್ಲಿ ದ್ರಢವಾಗಿ ಹಿಡಿದಿಡಲು ಸಮರ್ಥರಾಗಿದ್ದಾರೆ.
ಭೂಮಿ ಸ್ವಾಭಾವಿಕವಾಗಿ ಪ್ರತೀ ವಸ್ತುವನ್ನು ಸ್ವತಃ ತನ್ನತ್ತ ತಾನೇ ಆಕರ್ಷಿಸುತ್ತದೆ ಈ ಆಕರ್ಷಣೆಯ ಬಲದಿಂದಾಗಿ ಎಲ್ಲಾ ವಸ್ತುಗಳು ಭೂಮಿಯ ಮೇಲೆ ಬೀಳುತ್ತದೆ.
ಕನಾಡ ಎಂಬ ಋಷಿ ಹೀಗೆ ಉಲ್ಲೇಖಿಸಿದ್ದಾರೆ “ವಸ್ತುವಿನ ಅಣುವಿನ ಶಕ್ತಿಯಿಂದಾಗಿ ಮೇಲೆಸೆದ ವಸ್ತು ಭೂಮಿಯಿಂದ ಬೀಳುತ್ತದೆ” ಎಂದು. ಇಷ್ಟೇ ಅಲ್ಲದೇ ಬ್ರಹ್ಮಗುಪ್ತ ಜಗದ್ಗುರು ಶಂಕರಾಚಾರ್ಯರು ಕೂಡ ಇದರ ಬಗ್ಗೆ ಪ್ರಶ್ನೋಪನಿಷತ್ತಿನ ಟಿಪ್ಪಣಿ ಗ್ರಂಥದಲ್ಲಿ ಈ ರೀತಿ ಬರೆಯುತ್ತಾರೆ. ಹೇಗೆ ನೀರು ನೈಸರ್ಗಿಕವಾಗಿ ಕೆಳಮಟ್ಟದ ಹರಿವು ಹೊಂದಿರುವುದೋ ಅದೇ ರೀತಿ ಭೂಮಿಯುಸಹ ಆಕರ್ಷಣೆ ಶಕ್ತಿ ಹೊಂದಿದ್ದು ಎಲ್ಲಾ ವಸ್ತುಗಳು ಭೂಮಿಯ ಕಡೆಗೆ ಆಕರ್ಷಿತವಾಗುತ್ತದೆ.
ಇದ್ದನ್ನು ಅನೇಕ ಪಾಶ್ಚಾತ್ಯ ವಿಜ್ಞಾನಿಗಳು ಒಪ್ಪಿಕೊಂಡಿದ್ದು ಗುರುತ್ವಾಕರ್ಷಣ ಶಕ್ತಿಯನ್ನು ನ್ಯೂಟನ್ ಕಂಡುಹಿಡಿಯುವ ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ತಿಳಿದಿದ್ದರು. ಈ ಮಾತನ್ನು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಕೂಡ ಇತ್ತೀಚಿಗೆ ತಮ್ಮ ಸಂಶೋಧನಾ ಕಾರ್ಯಾಂಗದಲ್ಲಿ ಒಪ್ಪಿಕೊಂಡಿದೆ. ಭಾರತದ ಪರಂಪರೆಯಲ್ಲಿ ಎಷ್ಟೆಲ್ಲ ಸಾಮರ್ಥ್ಯವಿದ್ದರೂ ಭಾರತೀಯರಾದ ನಾವು ಮಾತ್ರ ಇದನ್ನು ಕಂಡು ಹಿಡಿದವರು ನ್ಯೂಟನ್ ಎನ್ನುತ್ತಿದ್ದೇವಲ್ಲ ಇನ್ನಾದರೂ ಸತ್ಯ ಸಂಗತಿಯನ್ನು ಎಲ್ಲರಿಗೂ ತಿಳಿಸೋಣ.
ಇದು ಇಂದಿನ ಭಾರತ ವೈಭವ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.