ಭೂಮಿಯು ಗೋಳಾಕಾರದಿಂದಿದೆ ಎಂಬ ವಿಷಯವನ್ನು ನಮಗೆ ನಮ್ಮ ಪಠ್ಯ ಪುಸ್ತಕಗಳು ಕೆಪ್ಲರ್ ಕೊಪರ್ನಿಕಸ್ ಗೆಲಿಲಿಯೋ ಕಂಡುಹಿಡಿದರು ಎಂಬುದು ಇದೆಯೇ ಹೊರತು ಭಾರತೀಯರು ಅದನ್ನು ಜಂಡುಹಿಡಿದರು ಎಂಬ ಉಲ್ಲೇಖವೂ ಇಲ್ವಲ್ಲ, ಆದರೆ ವಾಸ್ತವವಾಗಿ ಇವರುಗಳು ಇದನ್ನು ಕಂಡುಹಿಡಿಯುವ ಮುನ್ನವೇ ನಮ್ಮ ಪೂರ್ವಜರಿಗೆ ಇದರ ಬಗ್ಗೆ ಸಾಕಷ್ಟು ಜ್ಞಾನವಿತ್ತು.
ಋಗ್ವೇದದಲ್ಲಿ ಇದರ ಉಲ್ಲೇಖವೂ ಇದೆ.
“ಚಕ್ರಾನಾಸಃ ಪರೀಣಹಂ ಪೃಥಿವ್ಯಾಃ” ಇದರ ಅರ್ಥ ಭೂಮಿಯು ಗೋಳಾಕಾರದಲಿದ್ದು, ಮನುಷ್ಯರು ಅದರ ಸುತ್ತಳತೆಯಲ್ಲಿ ವಾಸವಿರುವರು.
ಸೂರ್ಯ ಸಿದ್ಧಾಂತವೂ ಇದರ ಬಗ್ಗೆ ತಿಳಿಸುತ್ತದೆ.
“ಮಧ್ಯೇ ಸಮತಂಡಸ್ಯ ಭೂಗೀಲೋ ವ್ಯೋಮಿನೀತಿಷ್ಠತಿ”
ಬ್ರಹ್ಮಾಂಡದ ಮಧ್ಯದಲ್ಲಿ ಗೋಳಾಕಾರದ ಭೂಮಿಯು ಸ್ಥಿರವಾಗಿ ನಿಂತಿದೆ.
ಭಾರತೀಯ ಖಗೋಳ ಶಾಸ್ತ್ರಜ್ಞ ಹಾಗು ಋಷಿಗಳು ಇದನ್ನು ತಮ್ಮ ಕೃತಿಯಲ್ಲಿಯೂ ಬರೆದಿದ್ದಾರೆ.
ಆರ್ಯಭಟ ತಮ್ಮ ಆರ್ಯಭಟೀಯಂನಲ್ಲಿ ಹೀಗೆ ಬರೆಯುತ್ತಾರೆ.
ಭೂಗೋಲಃ ಸರ್ವತೋ ವೃತಃ (ಭೂಮಿಯೂ ಎಲ್ಲಕಡೆಗಳಿಂದಲೂ ಸುತ್ತಾಗಿದೆ)
ವರಾಹ ಮಿಹೀರ ಎಂಬ ಶ್ರೇಷ್ಠ ಖಗೋಳ ವಿಜ್ಞಾನಿ ತಮ್ಮ ಪಂಚ ಸಿದ್ಧಾಂತಿಕಾ ಎಂಬ ಕೃತಿಯಲ್ಲಿ ಹೀಗೆ ಬರೆಯುತ್ತಾರೆ.
“ಪಂಚಮಹಾಭೂತಮಯಸ್ತಾರಾಗಣ ಪಂಜರೇ ಮಹೀಗೋಲಃ”
ಭೂಮಿಯೂ ತಾರಾ ಗಣದ ನಡುವೆ ಪಂಚಭೂತಗಳಿಂದ ಕೂಡಿದ್ದು ಹೇಗೆ ಕಬ್ಬಿಣದ ಚಂಡು ಪಂಜರದಲ್ಲಿ ನೆತಾಡುವುದೋ ಹಾಗೇ ಕಾಣುತ್ತದೆ.
ಈ ರೀತಿಯಾಗಿ ಸಾವಿರಾರು ವರ್ಷಗಳ ಹಿಂದೆಯೇ ಭೂಮಿಯು ಗೋಳಾಕಾರದಲ್ಲಿದೆ ಎಂಬುದನ್ನು ತಿಳಿದಿದ್ದರು ಹಾಗು ಅವರ ಕೃತಿಗಳು ಲ್ಯಾಟಿನ್ ಗ್ರಿಕ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದವಾಗಿದ್ದು ಅನೇಕ ವಿದೇಶಿ ವಿಜ್ಞಾನಿಗಳಿಗೆ ಖಗೋಳ ಶಾಸ್ತ್ರಜ್ಞರಿಗೆ ಇದು ಮಾರ್ಗದರ್ಶನವಾಗಿ ಎಲ್ಲರೂ ಇದರಿಂದಲೇ ವಿಚಾರ ಸಂಗ್ರಹಣೆ ಮಾಡಿರುವುದು. ಭಾರತೀಯ ಭಾಷೆಗಳಲ್ಲಿ ಈವತ್ತಿನ ವರೆಗೂ Geography ಎಂಬ ಪದಕ್ಕೆ ಭೂಗೋಳ ಶಾಸ್ತ್ರ ಎಂದೇ ಹೇಳುವ ವಾಡಿಕೆ ಇದೆ. ಭೂಗೋಳ ಎಂದರೆ ಗೋಳಾಕಾರದ ಭೂಮಿ ಶಾಸ್ತ್ರ ಎಂದರೆ ಅದನ್ನು ತಿಳಿಸುವ ವಿಜ್ಞಾನ. ಆದರೆ ವಿಪರ್ಯಾಸವೆಂದರೆ ನಾವು ನಮ್ಮ ಮಕ್ಕಳಿಗೆ ಇದನ್ನು ತಿಳಿಸುವ ಪ್ರಯತ್ನವೂ ಮಾಡಿಲ್ಲವಲ್ಲ. ನಮ್ಮ ಮುಂದಿನ ಪೀಳಿಗೆಗೆ ಭಾರತದ ಈ ಖಗೋಳ ಜ್ಞಾನದ ಬಗ್ಗೆ ತಿಳಿಸುವವರಾದರೂ ಯಾರು???? ನೀವೇ ಯೋಚಿಸಿ!!!!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.