ನವದೆಹಲಿ: ಎಲ್ಲರನ್ನೂ ಒಳಗೊಂಡ ಭವ್ಯ ಭಾರತದ ಕನಸು ನನಸಾಗುತ್ತಿದೆ. ಸಮಾಜದ ತಿರಸ್ಕಾರಕ್ಕೆ ಒಳಗಾಗಿ ಮೂಲೆಗುಂಪಾಗಿದ್ದ ತೃತೀಯ ಲಿಂಗಿ ಸಮುದಾಯ ಇಂದು ಸಮಾಜದ ಮುಖ್ಯವಾಹಿನಿಗೆ ಬರುತ್ತಿದೆ. ಸಿನಿಮಾ, ಶಿಕ್ಷಣ ಹೀಗೆ ವಿವಿಧ ವಲಯಗಳಲ್ಲಿ ಸದ್ದಿಲ್ಲದೆ ಹೆಜ್ಜೆ ಗುರುತನ್ನು ಮೂಡಿಸುತ್ತಿದೆ. ಸತ್ಯಶ್ರೀ ಶರ್ಮಿಳಾ ಎಂಬುವವರು ಈ ಸಮುದಾಯಕ್ಕೆ ಸೇರಿದ ದೇಶದ ಮೊದಲ ವಕೀಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮಿಳುನಾಡಿನ ಸತ್ಯಶ್ರೀ ಕಲ್ಲು ಮುಳ್ಳಿನ ಕಠಿಣ ಹಾದಿಯನ್ನು ಸವೆಸಿ ಇಂದು ದೇಶದ ಮೊದಲ ತೃತೀಯ ಲಿಂಗಿ ವಕೀಲೆ ಎನಿಸಿಕೊಂಡಿದ್ದಾರೆ. ಅವರ ಸಾಧನೆಯ ಹಿಂದಿನ ಕಥೆ ನಿಜಕ್ಕೂ ಭಯಾನಕ. ಕಟುಕ ಸಮಾಜದ ನಿಂದನೆ, ದೌರ್ಜನ್ಯ, ಮೂದಳಿಕೆಗಳನ್ನು ಸಹಿಸಿಕೊಂಡು ಇಂದು ತಮಿಳುನಾಡು ಬಾರ್ ಕೌನ್ಸಿಲ್ನ ಸದಸ್ಯತ್ವ ಪಡೆದುಕೊಂಡಿದ್ದಾರೆ.
36 ವರ್ಷದ ಸತ್ಯಶ್ರೀ, ವಕೀಲೆಯಾಗಿ ತೃತೀಯ ಲಿಂಗಿ ಸಮುದಾಯದ ಪರವಾದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ ಮತ್ತು ಅವರಿಗೆ ಸಿಗಬೇಕಾದ ಸ್ಥಾನಮಾನಗಳನ್ನು ದೊರಕಿಸಿಕೊಡುವತ್ತ ದೃಢ ಹೆಜ್ಜೆ ಹಾಕಿದ್ದಾರೆ.
ಇತ್ತೀಚಿಗಷ್ಟೇ ರಾಜಸ್ಥಾನದಲ್ಲಿ ತೃತೀಯಲಿಂಗಿಯೊಬ್ಬರು ಪೊಲೀಸ ಕಾನ್ಸ್ಸ್ಟೇಬಲ್ ಆಗಿ ನೇಮಕವಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.