ಮುಂಬಯಿ: ಮಹಾರಾಷ್ಟ್ರದ ಜೈಲುಗಳು ಮಹಿಳಾ ಸ್ನೇಹಿಯಾಗಿ ಮಾರ್ಪಾಡಾಗುತ್ತಿವೆ. ಅಲ್ಲಿನ 9 ಜೈಲುಗಳ ಆವರಣಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್ಗಳನ್ನು ಅಳವಡಿಸುವ ಕಾರ್ಯವನ್ನು ಮಹಿಳಾ ಆಯೋಗ ಮಾಡುತ್ತಿದೆ.
ಮಹಾರಾಷ್ಟ್ರದ ರಾಜ್ಯ ಮಹಿಳಾ ಆಯೋಗವು ವಿಶೇಷ ತನಿಖಾ ತಂಡವೊಂದನ್ನು ರಚನೆ ಮಾಡಿದ್ದು, ಪ್ರತಿ ಜೈಲಿನಲ್ಲೂ ಮಹಿಳೆಯರಿಗೆ ಅತ್ಯಗತ್ಯವಾದ ಮೂಲ ಸೌಕರ್ಯಗಳ ಸೌಲಭ್ಯವಿದೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಈ ತಂಡಕ್ಕೆ ನೀಡಲಾಗಿದೆ.
ಮಹಿಳೆಯರಿಗೆ ಪೌಷ್ಠಿಕತೆ, ಆಹಾರ, ನೈರ್ಮಲ್ಯ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ಒದಗಿಸುವ ಕೊಡುವ ಮಹತ್ವದ ಕಾರ್ಯವನ್ನು ಇದು ಕೈಗೊಂಡಿದ್ದು, ಇದರ ಭಾಗವಾಗಿ 9 ಜೈಲುಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್ ಮತ್ತು ಬರ್ನಿಂಗ್ ಮೆಶಿನ್ಗಳನ್ನು ಅಳವಡಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.