ಹೌದು ಇಂತಹದೊಂದು ಪ್ರಶ್ನೆ ಕೇಳಲೇ ಬೇಕಿದೆ, ಯಾಕೆಂದರೆ ಇವರ ವಿಚಾರಗಳನ್ನು ಒಡ್ಡುವುದಕ್ಕೆ, ದೂಷಿಸೋಕೆ, ಪ್ರಶಸ್ತಿ ಪುರಸ್ಕಾರ ಗಳಿಸೋಕೆ ಬಲಿಯಾಗಬೇಕಿರೋದು ಹಿಂದೂಗಳು, ಹಿಂದೂ ಸಮಾಜ.
ಇವರ ಈ ಆಕ್ರಮಣ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಇನ್ನೂ ಹೆಚ್ಚಾಗಿದೆ ಎಂದೇ ಹೇಳಬೇಕು, ಯಾಕೆಂದರೆ ಇವರ ತಾಳಕ್ಕೆ ತಕ್ಕಂತೆ ಮೋದಿ ಸರ್ಕಾರ ಕುಣಿಯುತ್ತಿಲ್ಲವಲ್ಲ ಅದಕ್ಕೆ. ಹಾಗಂತ ಇವರು ಕೈಕಟ್ಟಿ ಕೂತಿಲ್ಲ, ಇವರುಗಳು ಎನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ ಆದರೆ ವೇಗ ಕಡಿಮೆಯಾಗಿದೆ ಅಷ್ಟೇ. ಅದೂ ಕೂಡ ಇವರಿಗೆ NGO ಮೂಲಕ ಸಂದಾಯವಾಗುತ್ತಿದ್ದ ಹಣದ ಹರಿವು ಮೋದಿಯವರು ನಿಲ್ಲಿಸಿದ್ದರಿಂದ.
ಆಸಿಫಾ ವಿಚಾರದಲ್ಲಿ ಬೊಬ್ಬೆ ಹೊಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀ ಶರ್ಟ ಧರಿಸಿ ವಾರಗಟ್ಟಲೆ ನಿಮ್ಮ ಹೆಣ್ಣು ಮಕ್ಕಳನ್ನು ಭಾರತಕ್ಕೆ ಕಳಿಸಬೇಡಿ ಎಂದು ಹೋದ ದೇಶದಲ್ಲೆಲ್ಲಾ ನಮ್ಮ ದೇಶದ ಮರ್ಯಾದೆ ಕಳೆದಿರಲ್ಲಾ, ಆ ದಿನಗಳಲ್ಲಿ ನಮ್ಮ ದೇಶದಲ್ಲಿ 50 ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣ ದಾಖಲಾಗಿದ್ದವು ಅದರಲ್ಲಿ 19 ಚಿಕ್ಕ ಮಕ್ಕಳ ಅತ್ಯಾಚಾರ ಪ್ರಕರಣಗಳು ಸೇರಿದ್ದವು ಆದರೂ ನೀವು ಬಾಯಿಬಿಡಲಿಲ್ಲವೇಕೇ? ಯಾಕೆಂದರೆ ಅತ್ಯಾಚಾರದ ಸಂತ್ರಸ್ತೆಯರು ಹಿಂದೂಗಳಲ್ಲವೇ ? ಹಾಗೂ ಇನ್ನೂ ಕೆಲವು ಅತ್ಯಾಚಾರಗಳು ಶಾಂತಿದೂತರು ಮಾಡಿದ್ದು ಬಹುಶಃ ಅದಕ್ಕಾಗಿ ಬಾಯಿ ಬಿಡಲಿಲ್ವೇನೋ……
ಇಷ್ಟೆಲ್ಲಾ ಯಾಕೆ ಮೊನ್ನೆ 26 ನೇ ತಾರೀಕಿನಂದು ಮಧ್ಯಪ್ರದೇಶದ ಮಂದಸೋರ್ ಎಂಬಲ್ಲಿ 7 ವರ್ಷದ ಬಾಲಕಿಯನ್ನು ಅಪಹರಿಸಿ ಮಹಮ್ಮದ್ ಇರ್ಫಾನ್ ಮತ್ತು ಆತನ ಸ್ನೇಹಿತ ಸೇರಿ ಅತ್ಯಾಚಾರ ಎಸಗಿ ಕತ್ತು ಸೀಳಿದ್ದಾರೆ. ಈಗ ಆ ಚಿಕ್ಕಜೀವ ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ. ಇಷ್ಟೆಲ್ಲಾ ಆದರೂ ಈ ದೇಶದ ಬುದ್ಧಿ ಜೀವಿಗಳಿಗೆ, ವಿದ್ಯುನ್ಮಾನ ಮಾಧ್ಯಮಗಳ, ಮುದ್ರಣ ಮಾಧ್ಯಮಗಳ ಕಣ್ಣಿಗೆ ಕಾಣಲಿಲ್ಲವಲ್ಲ ಎಂಬುದು ವಿಪರ್ಯಾಸ ಛೇ… ಇದೆಲ್ಲ ಅವಲೋಕಿಸಿದರೆ ಹಿಂದೂ ಧರ್ಮೀಯರ ದಮನಕ್ಕೆ ಟೊಂಕ ಕಟ್ಟಿ ನಿಂತ ಹಾಗೆ ಕಾಣುತ್ತಿದೆ…..
ಇಷ್ಟಕ್ಕೂ ಇವರು ಹಿಂದೂಗಳ ಮೇಲೆ ಅಷ್ಟೊಂದು ದ್ವೇಷ ಕಾರೋಕೆ ಕಾರಣವೇನು?
ಉತ್ತರ ಸ್ಪಷ್ಟ. ಇದು ಅವರ ಪಾಲಿಗೆ ಬಂಡವಾಳವಿಲ್ಲದ ಉದ್ಯಮ. ಅದು ಕೊಡುವ ಕೆಲವು ಸೌಲಭ್ಯಗಳು ,ಪ್ರಶಸ್ತಿ ಪುರಸ್ಕಾರ, ನಿವೇಶನ ಉಚಿತ ವಿದೇಶ ಪ್ರವಾಸಗಳು ಹಾಗು ಇವರಿಗೆ ನಮ್ಮ ಶತ್ರು ರಾಷ್ಟ್ರಗಳಲ್ಲಿ ಸಿಗುವ ರಾಜಮರ್ಯಾದೆ. ಇರಲಿ, ಮತ್ತೊಂದೆಡೆ ಇವರಿಗೆ ಹಿಂದೂಗಳ ಮೇಲಿನ ಆಕ್ರಮಣ ಅತ್ಯಾಚಾರದ ಬಗ್ಗೆ ಮಾತಾಡಿದರೆ ಬಣ್ಣದ ಮಾತುಗಳನ್ನಾಡುತ್ತ ವ್ಯರ್ಥ ಕಾಲಹರಣ ಮಾಡುತ್ತಾರೆ ಅಷ್ಟೇ. ಇನ್ನು ಹಿಂದೂಗಳನ್ನು ಅಸಹಿಷ್ಣುಗಳು ಅಂತ ನಾಮಕರಣ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಮರ್ಯಾದೆ ಹರಾಜು ಹಾಕುವುದು ಇವರ ನಿತ್ಯಕಾಯಕಗಳಲ್ಲೊಂದು.
ನಿಜವಾಗಲೂ ಹಿಂದೂಗಳು ಅಸಹಿಷ್ಣುಗಳಾಗಿದ್ದರೆ ಈ ದೇಶದಲ್ಲಿ ಮುಸ್ಲಿಮರು, ಕ್ರೈಸ್ತರು ಬದುಕಲು ಆಗುತ್ತಿತ್ತೆ? ಜಗತ್ತಿನಲ್ಲಿ ಅತಿ ಹೆಚ್ಚು ಅಂದರೆ ಮೂರು ಲಕ್ಷಕ್ಕೂ ಅಧಿಕ ಮಸೀದಿಗಳು ನಮ್ಮ ದೇಶದಲ್ಲೇ ಇರೋದು. ಲಕ್ಷಗಟ್ಟಲೆ ಚರ್ಚುಗಳು ನಮ್ಮ ದೇಶದಲ್ಲೇ ಇರೋದು. ಅವರಿಗೂ ಕೂಡ ಸಮಾನ, ಒಂದರ್ಥದಲ್ಲಿ ಹಿಂದೂಗಳಿಗಿಂತ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ. ಇಷ್ಟೆಲ್ಲಾ ಇದ್ರೂ ಇವರು ಹೇಳೋದು ಏನು ಗೊತ್ತಾ ? ಇದು ಪ್ರಜಾಪ್ರಭುತ್ವ ರಾಷ್ಟ್ರ ಹಾಗಾಗಿ ಇದೇ ಹೊರತು ಬೇರೆಯಲ್ಲ ಅನ್ನೋ ರೆಡಿಮೇಡ್ ಉಡಾಫೆ ಉತ್ತರ.
ಹಾಗಿದ್ಮೇಲೆ ನನ್ನಲ್ಲಿ ಕೆಲವೊಂದು ಸಂಶಯಗಳಿವೆ ಉತ್ತರಿಸಿ.
ಯಾಕೆಂದರೆ ನಿಮ್ಮ ಈ ಜ್ಯಾತಾತೀತವಾದವೆಂಬುದು ಅಲ್ಪಸಂಖ್ಯಾತರ ಓಲೈಕೆಯಾಗಿ ಮಾರ್ಪಟ್ಟಿದೆ ಎನ್ನುವುದು ಮುಚ್ಚಿದ ಸಂಗತಿಯೆನಲ್ಲ.
ಜಗತ್ತಿನಲ್ಲಿ 56 ಮುಸ್ಲಿಂ ರಾಷ್ಟ್ರಗಳಿವೆ, ಆದರೆ ಹಜ್ (ಈಗ ಬದಲಾಗಿದೆ ಆದರೆ clarity ಇಲ್ಲ) (ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವರಿಗೆ ತಲುಪುತ್ತಿದೆ) ಸಬ್ಸಿಡಿ ನೀಡುವ ಒಂದೇ ಒಂದು ರಾಷ್ಟ್ರ ತೋರಿಸಿ ನೋಡೋಣ?
ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವಂತೆ ಹಿಂದೂಗಳಿಗೆ ವಿಶೇಷ ಹಕ್ಕು ಮಿಸಲಾತಿ ನೀಡಿರುವ ಯಾವುದಾದರೂ ಇಸ್ಲಾಮಿಕ್ ರಾಷ್ಟ್ರ ಈ ಜಗತ್ತಿನಲ್ಲಿದೆಯಾ?
ಮುಸ್ಲಿಮೇತರ ವ್ಯಕ್ತಿಯು ಅಧ್ಯಕ್ಷ ಅಥವಾ ಪ್ರಧಾನಿಯಾಗಿರುವ ಇಸ್ಲಾಮಿಕ್ ರಾಷ್ಟ್ರ ಯಾವುದಾದರೂ ಇದೆಯೆ? ಅಷ್ಟೆಲ್ಲಾ ಯಾಕೆ ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಮ್ಮು ಕಾಶ್ಮೀರದಲ್ಲಿ ಹಿಂದುವೊಬ್ಬ ಮುಖ್ಯಮಂತ್ರಿಯಾಗುವುದನ್ನು ಉಹಿಸಬಲ್ಲಿರಾ?
ಹಿಂದೂಗಳನ್ನೂ ಕೋಮುವಾದಿಗಳು, ಕೇಸರಿ ಭಯೋತ್ಪಾದಕರು ಅನ್ನುವ ನೀವುಗಳು ಅದೆಷ್ಟು ಹಿಂದೂಗಳು ಅಮಾಯಕರ ಕತ್ತು ಸೀಳಿದ್ದಾರೆ? ಅದೆಷ್ಟು ಬಾಂಬ್ ಹಾಕಿದ್ದಾರೆ ? ಅದೆಷ್ಟು ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆಂದು ಸಾಬೀತುಪಡಿಸಿ ಹೇಳಬೇಕಲ್ಲವೇ?
ಭಯೋತ್ಪಾದಕರ ವಿರುದ್ಧ ಫತ್ವಾ ಹೊರಡಿಸಿದ ಮುಲ್ಲಾ ಆಥವಾ ಮೌಲ್ವಿಯನ್ನೂ ಹೆಸರಿಸಲು ನಿಮ್ಮಿಂದ ಸಾಧ್ಯವೇ?
ಭಯೋತ್ಪಾದಕನೊಬ್ಬ ಸತ್ತಾಗ ಅವನ ಶವಯಾತ್ರೆಯಲ್ಲಿ ಭಾಗವಹಿಸುವ ಈ ದೇಶದ ಬಹುತೇಕ ಮುಸಲ್ಮಾನರನ್ನು ಖಂಡಿಸುವ ಧೈರ್ಯವಿದೆಯೇ?
ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ವಂದೇ ಮಾತರಂ ಗೀತೆ ಹಾಡಲು ನಿರಾಕರಿಸಿದಾಗ ಎಷ್ಟು ಜನ ಬುದ್ದಿಜೀವಿಗಳು ಖಂಡಿಸಿದಿರಿ?
ಮುಸ್ಲಿಂ ವಿಚಾರವಾದಿಯೊಬ್ಬರು ನೇರಪ್ರಸಾರದ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯ ತಲೆ ಕತ್ತರಿಸುತ್ತೇನೆ ಎಂದಾಗ ಎಲ್ಲಿದ್ದಿರೀ?
ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಮೂಢನಂಬಿಕೆ ನಿಷೇಧ ಕಾಯ್ದೆ ತಂದು ಅನ್ಯಧರ್ಮದವರನ್ನು ಹೊರಗಿಟ್ಟು ಬರಿ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸಿದಾಗ ನೀವೆಲ್ಲಿದ್ದಿರಿ?
ಇನ್ನು ದಲಿತರ ಬಗ್ಗೆ ಮಾತಾಡೋ ನೀವುಗಳು ಬಿಹಾರದಲ್ಲಿ ಕಳೆದ ವಾರ ಮುಸ್ಲಿಮರು ಮೂರು ಜನರ ಕುಟುಂಬವನ್ನು ಮನೆಗೆ ನುಗ್ಗಿ ಸಜೀವ ದಹನ ಮಾಡಿದರಲ್ಲಾ ಆವಾಗ ಎಲ್ಲಿದ್ರಿ ನೀವೆಲ್ಲ?
ಬಿಜೆಪಿ ಪಕ್ಷಕ್ಕೆ ಸೇರಿದ ರಾಜಕಾರಣಿಯೊಬ್ಬ ಕುದುರೆ ಕಾಲಿಗೆ ಹೊಡೆದನೆಂಬ ಕಾರಣಕ್ಕಾಗಿ ಇಡೀ ದೇಶದಲ್ಲಿ ನವರಂಧ್ರಗಳಿಂದ ಅತ್ತ ನೀವುಗಳು, save tiger ಅಂತ people for the ethical treatment of animals (PETA) ಜೊತೆ ಸೇರಿ ಅತ್ತ ನೀವುಗಳು ಎಂದಾದರೂ ಈ ದೇಶದಲ್ಲಿ ನಿರಂತರ ನಡೆಯುವ ಗೋ ಹತ್ಯೆ, ಗೋ ಕಳ್ಳ ಸಾಗಾಣಿಕೆ ಬಗ್ಗೆ ಬಾಯಿ ಬಿಟ್ಟಿದ್ದಿರೋ? ಯಾಕೇ ಬರಿ ಕುದುರೆ ಹುಲಿ ಸಿಂಹಗಳು ಮಾತ್ರ ಪ್ರಾಣಿಗಳು. ಗೋವುಗಳು ಪ್ರಾಣಿಗಳಲ್ಲವೆ? ಅವುಗಳಿಗೆ ಜೀವವಿರುವುದಿಲ್ಲವೇ? ಏನೂ… ಕಡಿದಾಗ ರಕ್ತ ಬರುವುದಿಲ್ಲವೇ?
ಇನ್ನೂ ಈ ದೇಶದ 79% ಹಿಂದೂಗಳು ಅಸಹಿಷ್ಣುಗಳಾಗಿದ್ದರೆ ಅಯೋಧ್ಯೆ, ಕಾಶಿ, ಮಥುರಾ ಬಿಟ್ಟು ಕೊಡಿ ಅಂತ ಸುಪ್ರೀಂಕೋರ್ಟ್ನಲ್ಲಿ ಗೋಗರೆಯೋ ಬದಲು ಬಲವಂತದಿಂದ ಮಂದಿರ ಕಟ್ಟುತ್ತಿರಲಿಲ್ಲವೇ?
ಮುಸ್ಲಿಂ ಮತ್ತು ಕ್ರೈಸ್ತರ ಕಲ್ಯಾಣಕ್ಕೆ ಮುಜರಾಯಿ ಇಲಾಖೆ ಪರವಾಗಿ ನೀಡುತ್ತಿರುವುದು ಹಿಂದೂ ದೇವಾಲಯಗಳಿಂದ ಬರುತ್ತಿರುವ ಕೊಟ್ಯಾಂತರ ರೂ. ಹಣವನ್ನು ಅಲ್ಲವೇ?
ಇಷ್ಟೆಲ್ಲಾ ಆದರೂ ಬಹುಸಂಖ್ಯಾತ ಹಿಂದೂ ವರ್ಗದವರು ತಮಗಾಗಿ ಯಾವುದೇ ವಿಶೇಷ ಸವಲತ್ತು ಕೇಳದೆ ಸಮಾನ ನಾಗರಿಕ ಸಂಹಿತೆ ಕೇಳಿದರೂ ವಿರೋಧಿಸುವ ನೀವುಗಳು ಹಿಂದೂಗಳನ್ನೂ ಕೋಮುವಾದಿಗಳೆನ್ನುವುದೆ ಹಾಸ್ಯಾಸ್ಪದ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಮತ್ತಿತರ ರಾಜ್ಯಗಳಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಅಲ್ಪಸಂಖ್ಯಾತರು ಎನ್ನುವುದಾದರೆ ಜಮ್ಮು ಕಾಶ್ಮೀರ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮೇಘಾಲಯ ಸೇರಿದಂತೆ ಭಾರತದ ಹತ್ತು ರಾಜ್ಯಗಳಲ್ಲಿ ಹಿಂದೂಗಳು ಕೂಡ ಅಲ್ಪಸಂಖ್ಯಾತರಾಗಿಲ್ಲವೆ ಅವರಿಗೇಕೆ ವಿಶೇಷ ಹಕ್ಕುಗಳನ್ನು ನೀಡಿಲ್ಲ ?
ಅಷ್ಟೇ ಅಲ್ಲ ನಿಮ್ಮನ್ನು ನೀವು ಹಿಂದೂಗಳೆಂದು ಕರೆದುಕೊಳ್ಳುವವರೇ ನಮ್ಮ ದೇಶಕ್ಕೆ ದೊಡ್ಡ ಸಮಸ್ಯೆಯಾಗಿದ್ದೀರೆಂದು ಸ್ವಯಂ ಓಪ್ಪಿಕೊಳ್ಳಬೇಕು.
ಮಾತೆತ್ತಿದರೆ 2002 ರ ಗೋದ್ರಾ ಹತ್ಯಾಕಾಂಡದ ಬಗ್ಗೆ ಮಾತಾಡೋ ನೀವು 1984 ರ ಹತ್ಯಾಕಾಂಡದ ಬಗ್ಗೆ ಮೌನವಹಿಸುವುದೇಕೆ? ಅಷ್ಟಕ್ಕೂ ಗೋದ್ರಾ ಗಲಭೆ ಶುರುವಾಗಿದ್ದೇಕೆ ಹೇಳಿ ನೋಡೋಣ?
ಜಮ್ಮು ಕಾಶ್ಮೀರದಲ್ಲಿ 1980 ರಿಂದ 1995 ರವರೆಗೆ ಸತ್ತ ನಾಲ್ಕ ಲಕ್ಷಕ್ಕೂ ಅಧಿಕ ಹಿಂದೂ ಕಾಶ್ಮೀರದ ಪಂಡಿತರ ಬಗ್ಗೆ ಚಕಾರವೆತ್ತಲಿಲ್ಲವೇಕೆ?
ಇವತ್ತಿಗೂ ಕಾಶ್ಮೀರದ ಸಾವಿರಾರು ನಿರಾಶ್ರಿತರು ಮುಂಬಯಿಯಲ್ಲಿ ಫುಟ್ಪಾತ್ ಮೇಲೆ ಸೂರಿಲ್ಲದೆ ಜೀವಿಸುತಿದ್ದಾರಲ್ಲ ಅದು ಕಾಣದೆ ತಮ್ಮ ಕಣ್ಣಿಗೆ ?
1947ರಲ್ಲಿ ಧರ್ಮಧಾರಿತ ದೇಶ ವಿಭಜನೆಗೊಂಡಾಗ ಪಾಕಿಸ್ಥಾನದಲ್ಲಿ ಹಿಂದುಗಳ ಸಂಖ್ಯೆ 24% ಇತ್ತು ಇಂದು 0.7% ಗೆ ಇಳಿದಿದೆಯಲ್ಲ ಕಾರಣ ಹೇಳುವಿರಾ?
ಇತ್ತ ಬಾಂಗ್ಲಾದೇಶದಲ್ಲಿ 1972ರಲ್ಲಿ ಶೇ.39% ರಷ್ಟಿದ್ದ ಹಿಂದೂಗಳ ಸಂಖ್ಯೆ ಶೇ.5% ಕ್ಕೆ ಇಳಿದಿದೆಯಲ್ಲ ನಿಮಗೆ ಕಾಣಿಸುವುದಿಲ್ಲವೇ ಇವೆಲ್ಲ ?
ಇದಕ್ಕೆ ತದ್ವಿರುದ್ಧವಾಗಿ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಬೆಳೆಯುತ್ತಿದೆಯಲ್ಲಾ ಇದೆಲ್ಲಾ ಹಿಂದೂ ಅಸಹಿಷ್ಣು ಆಗಿದ್ದರೆ ಸಾಧ್ಯವಾಗುತಿತ್ತೆ?
ನಮ್ಮ ಅನೇಕ ಹಿಂದೂ ದೇವಸ್ಥಾನಗಳಲ್ಲಿ ಅದರ ಆಡಳಿತ ಮಂಡಳಿಗಳಲ್ಲಿ ಅಲ್ಪಸಂಖ್ಯಾತರನ್ನು ನೇಮಕ ಮಾಡಿದನ್ನು ಒಪ್ಪಿ ಅಪ್ಪಿಕೊಳ್ಳೋ ನೀವುಗಳು ಹಿಂದೂವೊಬ್ಬ ಮಸೀದಿ, ಮದರಸಾ, ಚರ್ಚಿನ ಟ್ರಸ್ಟಿ ಏಕಾಗಿಲ್ಲ ? ಸರ್ಕಾರ ಯಾಕೆ ಮಾಡಿಲ್ಲ ಅನ್ನುವ ಬಗ್ಗೆ ಯಾವತ್ತಾದ್ರೂ ಕೇಳಿದ್ದಿರೇನು ?
ಕಾಶ್ಮೀರದ ಕಲ್ಲು ತೂರಾಟ ಮಾಡುವವರ ಮಾನವ ಹಕ್ಕುಗಳ ಬಗ್ಗೆ ಮಾತಾಡೋ ನೀವುಗಳು, ಪೆಲೆಟ್ ಗನ್ ನಿಷೇಧ ಮಾಡೋ ಬಗ್ಗೆ ಮಾತಾಡುವ ನೀವು ಆ ಕಲ್ಲು ತೂರುವ ಯುವಕರಿಂದ ಶಾಶ್ವತವಾಗಿ ಅಂಗವಿಕಲರಾಗಿ ಇರವಂತಹ ಹಾಗು ಪ್ರಾಣ ಬಲಿದಾನ ಕೊಟ್ಟಂತಹ ಭಾರತೀಯ ಸೈನಿಕರ ಬಗ್ಗೆ ಬಾಯಿ ಬಿಡುವುದಿಲ್ಲವಲ್ಲ ಏಕೆ ?
ಇನ್ನು ಮೊನ್ನೆ ಯುನೈಟೆಡ್ ನೇಷನ್ಸ್ ವರದಿ ಕಾಶ್ಮೀರದ ಯುವಕರ ಪರವಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಕಾರಣ ಅದನ್ನು ಜಾರಿ ಮಾಡಿದ್ದು ಒಬ್ಬ ಮತಾಂಧ ಮುಸ್ಲಿಂ. ಅದನ್ನು ಭಾರತವಲ್ಲದೆ ಇನ್ನೂ ಆರು ರಾಷ್ಟ್ರಗಳು ವಿರೋಧಿಸಿದವು ಗೊತ್ತೆ ? ಆ ಆರೂ ರಾಷ್ಟ್ರಗಳಿಗೆ ಇರುವ ಭಾರತ ಪ್ರೇಮ ನಿಮಗಿಲ್ಲವೇ ಛೇ……
ಇಷ್ಟಾಗಿಯೂ ಹಿಂದೂಗಳನ್ನೂ ಕೋಮುವಾದಿ, ಕೇಸರಿ ಭಯೋತ್ಪಾದಕರು ಅನ್ನುವುದು ವಿಪರ್ಯಾಸವೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.