ನವದೆಹಲಿ: ಯಾವುದೇ ಜಾಗದಲ್ಲಿ ಕುಳಿತುಕೊಂಡು ಪಾಸ್ಪೋರ್ಟ್ಗೆ ಅರ್ಜಿ ಹಾಕಲು ಅನುವು ಮಾಡಿಕೊಡುವ ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ಸೇವಾ ಮೊಬೈಲ್ ಆ್ಯಪ್ , ಆರಂಭಗೊಂಡ ಕೇವಲ ಎರಡು ದಿನಗಳಲ್ಲಿ ಒಂದು ಮಿಲಿಯನ್ ಡೌನ್ಲೋಡ್ ಕಂಡಿದೆ.
ಜೂನ್ 26ರಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಆ್ಯಪ್ಗೆ ಚಾಲನೆ ನೀಡಿದ್ದರು. ಆಂಡ್ರಾಯ್ದ್ ಮತ್ತು ಐಒಎಸ್ಗಳೆರಡರಲ್ಲೂ ಇದು ಲಭ್ಯವಾಗುತ್ತದೆ, ಈ ಆ್ಯಪ್ ಮೂಲಕ ಭಾರತದ ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ಮೊಬೈಲ್ನಲ್ಲಿ ಪಾಸ್ಪೋರ್ಟ್ಗೆ ಅರ್ಜಿ ಹಾಕಬಹುದು, ಪಾವತಿ ಮಾಡಬಹುದು ಮತ್ತು ಪಾಸ್ಪೋರ್ಟ್ ಪಡೆಯಲು ಅಪಾಯಿಂಟ್ಮೆಂಟ್ ಪಡೆದುಕೊಳ್ಳಬಹುದು.
ಟ್ವಿಟ್ ಮಾಡಿರುವ ಸುಷ್ಮಾ, ‘ವಿದೇಶಾಂಗ ಸಚಿವಾಲಯದ ವತಿಯಿಂದ ಬಿಡುಗಡೆಗೊಳಿಸಲಾದ ಪಾಸ್ಪೋರ್ಟ್ ಸೇವಾ ಮೊಬೈಲ್ ಆ್ಯಪ್ ಈಗಾಗಲೇ 1 ಮಿಲಿಯನ್ ಡೌನ್ಲೋಡ್ಗಳನ್ನು ಕಂಡಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.