ನವದೆಹಲಿ: ಗ್ರೂಪ್ ವೀಸಾವನ್ನು ಕಳೆದುಕೊಂಡು ಚೀನಾದಲ್ಲಿ ತೊಂದರೆಗೆ ಸಿಲುಕಿಕೊಂಡಿರುವ 20 ಮಂದಿ ಭಾರತೀಯರ ನೆರೆವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ.
ಕೌಟಿಲ್ಯ ಬನ್ಸಾಲ್ ಎಂಬುವವರು ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ.
20 ಮಂದಿಯ ತಂಡದಲ್ಲಿ 11 ತಿಂಗಳ ಮಗು ಕೂಡ ಇದೆ, ಹೀಗಾಗಿ ತುರ್ತು ಸಹಾಯದ ಅವಶ್ಯಕತೆ ಇದೆ ಎಂದು ಬೇಡಿಕೊಂಡಿದ್ದಾರೆ. ತಕ್ಷಣವೇ ಸುಷ್ಮಾ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿ ತಂಡಕ್ಕೆ ಸಹಾಯ ಮಾಡಿದ್ದಾರೆ.
11 ವರ್ಷದ ಮಗನ ವೀಸಾ ಡ್ಯಾಮೇಜ್ ಆದ ಪರಿಣಾಮ ಟೊರೆಂಟೋದಲ್ಲಿ ಸಂಕಷ್ಟಕ್ಕೀಡಾದ ತಂದೆಯ ಸಾಹಯಕ್ಕೂ ಇವರು ಧಾವಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.