ನವದೆಹಲಿ : ಬಾಬಾ ರಾಮ್ದೇವ್ ಅವರ ಪತಂಜಲಿ ಯೋಗ ಸಂಸ್ಥೆ ಈಗ ನೂಡಲ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ, ಇದು ಮ್ಯಾಗಿ ನೂಡಲ್ಸ್ ತರಹದ ಉತ್ಪನ್ನವಾಗಿದ್ದು ಆಯುರ್ವೇದಿಕ ಅಂಶಗಳಿಂದ ಕೂಡಿದೆ ಎಂದು ಹೇಳಲಾಗಿದೆ.
ಇತ್ತೀಚಿಗೆ ಸೀಸದ ಅಂಶ ಅಧಿಕ ಹೊಂದಿರುವ ಕಾರಣ ನೆಸ್ಲೆಯವರ ಮ್ಯಾಗಿ ಸರಕಾರ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಮಾರುಕಟ್ಟೆಯಿಂದ ಈ ಉತ್ಪನ್ನವನ್ನು ವಾಪಾಸ್ ಪಡೆಯಲಾಗಿದೆ.
ಹೀಗಾಗಿ ಪತಂಜಲಿ ಸಂಸ್ಥೆ ಸ್ವದೇಶಿ ನೂಡಲ್ಸ್ ಅನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಿದೆ. ಅಲ್ಲದೇ ನೆಸ್ಲೆ ಸಂಸ್ಥೆ ಭಾರತದ ಸಾರ್ವಜನಿಕರ ಕ್ಷಮೆಯಾಚಿಸಬೇಕು. ಸರಕಾರ ಕಂಪನಿ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಇಂತಹ ವಿಷ ಮಿಶ್ರಿತ ಉತ್ಪನ್ನ ಭಾರತಕ್ಕೆ ಬೇಡ ಎಂದು ಸಂಸ್ಥೆ ಆಗ್ರಹಿಸಿದೆ.
ಆಯುರ್ವೇದ ಔಷಧಿ ಮಾರಾಟದಿಂದ ಪತಂಜಲಿ ಯೋಗ ಸಂಸ್ಥೆ ಒಳ್ಳೆಯ ಹೆಸರನ್ನು ಹೊಂದಿದೆ, ಇದೀಗ ಇತಂಹ ಉತ್ಪನ್ನಗಳನ್ನು ತರುವ ಮೂಲಕ ತನ್ನ ವ್ಯವಹಾರವನ್ನು ವಿಸ್ತರಿಸಲು ಚಿಂತನೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.