ನವದೆಹಲಿ: ಇಂಧನ ಬೆಲೆಯಲ್ಲಿ ಸತತ ಆರನೇ ದಿನವೂ ಕೊಂಚ ಇಳಿಕೆಯಾಗಿದೆ. ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 14-18 ಪೈಸೆ ಕಡಿತವಾಗಿದೆ ಮತ್ತು ಡಿಸೇಲ್ ಬೆಲೆಯಲ್ಲಿ 10-14 ಪೈಸೆ ಕಡಿತವಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ರೂ.76.77 ಪೈಸೆಗೆ ಪೆಟ್ರೋಲ್ನ್ನು ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ ಇದರ ಬೆಲೆ ರೂ.75.69ರಷ್ಟಿದೆ.
ಸೋಮವಾರವೂ ಪೆಟ್ರೋಲ್ ಬೆಲೆ 1 ಪೈಸೆ ಇಳಿಕೆಯಾಗಿತ್ತು. ಪೈಸೆ ಲೆಕ್ಕದಲ್ಲಿ ದರ ಇಳಿಕೆಯಾಗುತ್ತಿರುವುದು ಗ್ರಾಹಕರನ್ನು ಅಸಮಾಧಾನಕ್ಕೀಡು ಮಾಡಿದೆ. ಆದರೂ ಮುಂಬರುವ ದಿನಗಳಲ್ಲಿ ದರ ಇಳಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.