ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಜನಭಾಗಿತ್ವವನ್ನು ಪಡೆಯಲು ಟ್ರಾಯ್ ಮುಂದಾಗಿದೆ. ಸಾರ್ವಜನಿಕ ವೈಫೈ ನೆಟ್ವರ್ಕ್ಗಳಿಗೆ ಹೆಸರು, ಲೋಗೋ ವಿನ್ಯಾಸಗೊಳಿಸುವ ಸ್ಪರ್ಧೆಯನ್ನು ಅದು ಸಾರ್ವಜನಿಕರಿಗೆ ನೀಡಿದೆ.
ಸಾರ್ವಜನಿಕ ವೈಫೈ ನೆಟ್ವರ್ಕ್ಗಳ ಮೂಲಕ ಕೈಗೆಟಕುವ ದರದ ಬ್ರಾಡ್ಬ್ಯಾಂಡ್ ಪ್ರಸರಣ ನೀಡುವ ತನ್ನ ದೂರದೃಷ್ಟಿಯ ಯೋಜನೆಯಲ್ಲಿ ಜನರ ನೇರ ಭಾಗಿಯನ್ನು ಅದು ಬಯಸುತ್ತಿದೆ. ಈ ಹಿನ್ನಲೆಯಲ್ಲಿ ಲೋಗೋ, ಹೆಸರು ವಿನ್ಯಾಸಪಡಿಸುವ ಸ್ಪರ್ಧೆಯನ್ನು ಸಾರ್ವಜನಿಕರಿಗೆ ನೀಡಿದೆ.
ಜುಲೈ 2 ರೊಳಗೆ ಇದಕ್ಕೆ ಆಸಕ್ತರು ನೋಂದಣಿ ಮಾಡಬಹುದಾಗಿದೆ. ಆಯ್ಕೆಯಾದ ವಿಜೇತರಿಗೆ ರೂ.50 ಸಾವಿರ ಬಹುಮಾನ ದೊರೆಯಲಿದೆ.
ಈಗಾಗಲೇ ಭಾರತ ಸರ್ಕಾರ ಸ್ವಚ್ಛ ಭಾರತದಂತಹ ಯೋಜನೆಗಳಿಗೆ ಸಾರ್ವಜನಿಕರಿಂದಲೇ ಲೋಗೋ ತಯಾರಿಸಿ ಯಶಸ್ವಿಯಾಗಿದೆ. ಟ್ರಾಯ್ ಕೂಡ ಇದನ್ನೇ ಅನುಸರಿಸಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.