ಇಸ್ಲಾಮಾಬಾದ್: ಲಷ್ಕರ್ ಇ ತೋಯ್ಬಾ ಸಂಘಟನೆ ಪಾಕಿಸ್ಥಾನದ ಎಂಜಿನಿಯರ್ಗಳಿಗೆ ಲಾಹೋರ್ನ ಹೆಡ್ಕ್ವಾಟರ್ನಲ್ಲಿ ಮ್ಯಾನೇಜ್ಮೆಂಟ್ ತರಬೇತಿಯನ್ನು ನೀಡುತ್ತಿದೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ, ಲಷ್ಕರ್ ಪಾಕ್ನ ಹಲವಾರು ಎಂಜಿನಿಯರ್ಗಳಿಗೆ ಮ್ಯಾನೇಜ್ಮೆಂಟ್ ತರಬೇತಿಯನ್ನು ನೀಡುತ್ತಿದೆ. ತರಬೇತಿ ಪಡೆದ ಬಳಿಕ ಅವರಿಗೆ ಪಾಕಿಸ್ಥಾನ-ಚೀನಾ ಎಕನಾಮಿಕ್ ಕಾರಿಡಾರ್ನಲ್ಲಿ ಉದ್ಯೋಗ ದೊರಕಿಸಿಕೊಡುವ ಉದ್ದೇಶ ಇಟ್ಟುಕೊಂಡಿದೆ.
ಈ ತರಬೇತಿಯ ಸಂಪೂರ್ಣ ಜವಾಬ್ದಾರಿಯನ್ನು ಮುಂಬಯಿ ಸ್ಫೋಟದ ಮಾಸ್ಟರ್ಮೈಂಡ್ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಗೆ ನೀಡಲಾಗಿದೆ ಎನ್ನಲಾಗಿದೆ.
ಯಾವ ತರನಾದ ಮ್ಯಾನೇಜ್ಮೆಂಟ್ ತರಬೇತಿ ಇದು ಎಂದು ತಿಳಿದು ಬಂದಿಲ್ಲ, ಆದರೆ ಕಾರಿಡಾರ್ನಲ್ಲಿ ಉದ್ಯೋಗಕೊಡಿಸಿ ಅವರಿಗೆ ತಿಂಗಳು ತಿಂಗಳು ಬರುವ ವೇತನದಿಂದ ಇಂತಿಷ್ಟು ಪಡೆದುಕೊಳ್ಳುವ ಉದ್ದೇಶವನ್ನು ಲಷ್ಕರ್ ಹೊಂದಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.