ಶ್ರೀನಗರ: ಅಮರನಾಥ ಯಾತ್ರೆ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುತ್ತಿದೆ. ಈ ವೇಳೆ ದಾಳಿ ನಡೆಸಲು ಉಗ್ರರು ಸಂಚನ್ನು ರೂಪಿಸಿದ್ದಾರೆ ಎಂಬ ಮಾಹಿತಿಯಿದ್ದು, ಅತ್ಯುನ್ನತ ಮಟ್ಟದ ಅಲರ್ಟ್ನಲ್ಲಿ ಇರುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ.
ಜೂನ್ 28ರಿಂದ ಹಿಮಾಲಯದ ತಪ್ಪಲಲ್ಲಿ ಇರುವ ಅಮರನಾಥ ದೇಗುಲಕ್ಕೆ ಯಾತ್ರೆ ಆರಂಭಗೊಳ್ಳಲಿದೆ. ಎರಡು ತಿಂಗಳುಗಳ ಕಾಲ ಯಾತ್ರೆ ಜರುಗಲಿದ್ದು, ಆಗಸ್ಟ್ ಅಂತ್ಯದಲ್ಲಿ ಕೊನೆಗೊಳ್ಳಲಿದೆ.
ಗಡಿಯ ಎಲ್ಲಾ ಪೊಲೀಸ್ ಸ್ಟೇಶನ್ಗಳು, ಪೋಸ್ಟ್ ಮತ್ತು ಚೆಕ್ ಪಾಯಿಂಟ್ಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಒಳನುಸುಳುವಿಕೆಗಳು ಕಂಡು ಬಂದರೆ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ತಿಳಿಸಲಾಗಿದೆ.
ಕಳೆದ ಬಾರಿಯೂ ಅಮರನಾಥ ಯಾತ್ರೆಯ ವೇಳೆ ಉಗ್ರರ ದಾಳಿಗಳು ನಡೆದಿತ್ತು, ಈ ಬಾರಿ ಅದು ಪುನಾರವರ್ತನೆಯಾಗದಂತೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.