ಚೆನ್ನೈ: ಭಾರತದ ಯುವ ಜನತೆ ಆವಿಷ್ಕಾರ ಮತ್ತು ಸಂಶೋಧನೆಗಳತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಮಾನವನಿಗೆ ಪ್ರಯೋಜನಕಾರಿಯಾಗಬಲ್ಲ ಆವಿಷ್ಕಾರಗಳನ್ನು ಯುವ ಪೀಳಿಗೆ ನಡೆಸುತ್ತಿರುವುದು ಭರವಸೆ ಮೂಡಿಸಿದೆ. ಚೆನ್ನೈನ ವಿದ್ಯಾರ್ಥಿಗಳ ತಂಡವೊಂದು ಇಂತಹುದೇ ಪ್ರಯೋಜನಕಾರಿ ಆವಿಷ್ಕಾರವೊಂದನ್ನು ಮಾಡಿದೆ.
ಜೀವ ಉಳಿಸುವಂತಹ ಡ್ರೋನ್ವೊಂದನ್ನು ಚೆನ್ನೈನ ಸೈಂಟ್ ಪೀಟರ್ಸ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಡ್ರೋನ್ ಅಪಘಾತದಂತಹ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸಾ ಕಿಟ್ನ್ನು ಅಗತ್ಯವುಳ್ಳವರಿಗೆ ತಲುಪಿಸುವ ಕಾರ್ಯ ಮಾಡಬಲ್ಲದು.
ಅಪಘಾತವಾದ ಸ್ಥಳಕ್ಕೆ ಅಂಬುಲೆನ್ಸ್ ತಲುಪಲು ಹಲವು ಸಮಯ ತೆಗೆದುಕೊಳ್ಳುತ್ತದೆ. ಟ್ರಾಫಿಕ್ ಜಾಮ್, ಇತ್ಯಾದಿ ಸಮಸ್ಯೆಗಳಿಂದ ಅದು ತಲುಪುವ ಸಮಯ ಮತ್ತಷ್ಟು ವಿಳಂಬವಾಗುತ್ತದೆ. ಆದರೆ ಈ ಡ್ರೋನ್ ಅತಿ ಶೀಘ್ರದಲ್ಲೇ ಚಿಕಿತ್ಸಾ ಕಿಟ್ನ್ನು ಸಂತ್ರಸ್ಥನ ಬಳಿಗೆ ತಲುಪಿಸಬಲ್ಲದು. ಟ್ರಾಫಿಕ್ ಜಾಮ್ನಂತಹ ಸಮಸ್ಯೆಗಳು ಇದನ್ನು ಬಾಧಿಸುವುದಿಲ್ಲ.
ಈ ಡ್ರೋನ್ ಗಂಟೆಗೆ 70 ಕಿಲೋಮೀಟರ್ ದೂರ ಸಾಗಬಲ್ಲದು. 8 ಕೆಜಿ ಭಾರ ಹೊರಬಲ್ಲದು. ಪ್ರಸ್ತುತ 3 ಕಿಮೀವರೆಗೆ ಇದು ರಿಮೋಟ್ ಕಂಟ್ರೋಲ್ಗೊಳಪಡುತ್ತದೆ. ವಿದ್ಯಾರ್ಥಿಗಳ ತಂಡ ಈ ಅಂತರವನ್ನು ಇನ್ನಷ್ಟು ಹೆಚ್ಚುಗೊಳಿಸಲು ಪ್ರಯತ್ನಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.