ನವದೆಹಲಿ: ಭಾರತದ ಆರೋಗ್ಯ ವಲಯಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಮಂಗಳವಾರ, ನ್ಯಾಷನಲ್ ಹೆಲ್ತ್ ರಿಸೋರ್ಸ್ ರೆಪೊಸಿಟರಿ(ಎನ್ಎಚ್ಆರ್ಆರ್)ಯನ್ನು ಅನಾವರಣಗೊಳಿಸಿದ್ದಾರೆ.
ಇದು ಭಾರತದ ಮೊತ್ತ ಮೊದಲ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಅಧಿಕೃತ, ಪ್ರಮಾಣೀಕರಿಸಿದ ಮತ್ತು ನವೀಕೃತ ಭೌಗೋಳಿಕ ಮಾಹಿತಿಯನ್ನೊಳಗೊಂಡ ರಾಷ್ಟ್ರೀಯ ಆರೋಗ್ಯ ಸೌಲಭ್ಯವಾಗಿದೆ.
ಇದೇ ವೇಳೆ ನಡ್ಡಾ ಅವರು, ಸೆಂಟ್ರಲ್ ಬ್ಯುರೋ ಆಫ್ ಹೆಲ್ತ್ ಇಂಟೆಲಿಜೆನ್ಸ್ ಸಿದ್ಧಪಡಿಸಿದ ನ್ಯಾಷನಲ್ ಹೆಲ್ತ್ ಪ್ರೊಫೈಲ್ 2018ನ್ನು ಬಿಡುಗಡೆಗೊಳಿಸಿದರು. ಇದು ಜನಸಂಖ್ಯಾ, ಸಾಮಾಜಿಕ-ಆರ್ಥಿಕ, ಆರೋಗ್ಯ ಸ್ಥಾನಮಾನ, ಆರೋಗ್ಯ ಹಣಕಾಸು ಸೂಚಕ, ಆರೋಗ್ಯ ಮೂಲಸೌಕರ್ಯ, ಆರೋಗ್ಯ ವಲಯದ ಮಾನವಸಂಪನ್ಮೂಲಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ಇದೇ ವೇಳೆ ವಾರ್ಷಿಕ ದಾಖಲೆಗಳ ಇ-ಬುಕ್ ಬಿಡುಗಡೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.