ಮಾಸ್ಕೋ: ಭಾರತದ ಇಬ್ಬರು ಮಕ್ಕಳು ಪ್ರಸ್ತುತ ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್ಕಪ್ನ ಅಧಿಕೃತವಾಗಿ ಪಂದ್ಯದ ಚೆಂಡು ತೆಗೆದುಕೊಂಡು ಹೋಗುವವರಾಗಿ ನೇಮಕವಾಗಿದ್ದಾರೆ.
ಕರ್ನಾಟಕದ 10 ವರ್ಷದ ರಿಷಿ ತೇಜ್ ಮತ್ತು ತಮಿಳುನಾಡಿನ 11 ವರ್ಷದ ನತಾನಿಯಾ ಜಾನ್ ಕೆ ಅವರು ಆಫೀಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್ಸ್(ಓಎಂಬಿಸಿ)ಗಳಾಗಿ ನೇಮಕವಾಗಿದ್ದಾರೆ.
ರಿಷಿ ತೇಜ್ ಜೂನ್ 18ರಂದು ಸೋಮವಾರ ನಡೆದ ಬೆಲ್ಜಿಯಂ ವರ್ಸಸ್ ಪನಾಮ ಪಂದ್ಯದಲ್ಲಿ ಚೆಂಡು ತೆಗೆದುಕೊಂಡು ಹೋಗಿದ್ದಾರೆ. ನತಾನಿಯಾ ಜೂನ್ 22ರಂದು ಶುಕ್ರವಾರ ಬ್ರೆಝಿಲ್ ವರ್ಸಸ್ ಕೋಸ್ಟರಿಕ ಪಂದ್ಯದ ಬಾಲ್ ತೆಗೆದುಕೊಂಡು ಹೋಗಲಿದ್ದಾರೆ.
ಗೋರೆಗಾಂವ್ನಲ್ಲಿ ಕಳೆದ ತಿಂಗಳು ಈ ಮಕ್ಕಳ ಆಯ್ಕೆ ಪ್ರಕ್ರಿಯೆ ನಡೆದಿತ್ತು, 1600 ಮಕ್ಕಳು ಇದರಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಇಬ್ಬರನ್ನು ಆರಿಸಲಾಗಿತ್ತು. ಭಾರತದ ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ ಇವರಿಗೆ ತರಬೇತಿಯನ್ನು ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.