ಭೋಪಾಲ್: ಬದುಕಿನ ಬಂಡಿ ಸಾಗಿಸುವ ಸಲುವಾಗಿ ಜಿಲ್ಲಾಧಿಕಾರಿ ಕಛೇರಿ ಎದುರು ಟೈಪ್ರೈಟರ್ ಆಗಿ ಕೆಲಸ ನಿರ್ವಹಿಸುವ 72 ವರ್ಷದ ಮಹಿಳೆ ಈಗ ಮನೆ ಮಾತಾಗಿದ್ದಾರೆ. ಇದಕ್ಕೆ ಕಾರಣ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇವರ ವೀಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿ ‘ಸೂಪರ್ ವುಮೆನ್’ ಎಂದು ಇವರನ್ನು ಬಣ್ಣಿಸಿದ್ದು.
72ರ ಇಳಿ ವಯಸ್ಸಿನಲ್ಲೂ ಅತೀ ವೇಗದಲ್ಲಿ ಟೈಪಿಂಗ್ ಮಾಡುವ ಇವರನ್ನು ಸೂಪರ್ ವುಮೆನ್ ಎಂದು ಸೆಹ್ವಾಗ್ ಬಣ್ಣಿಸಿದ್ದು, ಯುವಕರು ಇವರಿಂದ ಕಲಿಯುವುದು ಸಾಕಷ್ಟಿದೆ ಎಂದಿದ್ದಾರೆ.
ಟ್ವಿಟ್ ಮಾಡಿರುವ ಸೆಹ್ವಾಗ್, ‘ಈಕೆ ನನಗೆ ಸೂಪರ್ ವುಮೆನ್, ಮಧ್ಯಪ್ರದೇಶದ ಸೆಹೋರ್ನಲ್ಲಿ ಇವರು ವಾಸಿಸುತ್ತಿದ್ದಾರೆ. ವೇಗ ಮಾತ್ರವಲ್ಲ ಸ್ಫೂರ್ತಿ ಮತ್ತು ಶ್ರದ್ಧೆಯನ್ನು ಯುವ ಜನತೆ ಇವರಿಂದ ಕಲಿಯಬೇಕಾಗಿದೆ. ಯಾವುದೇ ಕಾರ್ಯ ಚಿಕ್ಕದಲ್ಲ, ಕಲಿಯಲು ಮತ್ತು ಕೆಲಸ ಮಾಡಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ಇವರು ತೋರಿಸಿಕೊಡುತ್ತಿದ್ದಾರೆ’ ಎಂದಿದ್ದಾರೆ.
ಮಗಳಿಗೆ ಅಪಘಾತವಾದ ಹಿನ್ನಲೆಯಲ್ಲಿ ಇವರು ಬ್ಯಾಂಕ್ನಿಂದ ಸಾಲ ಪಡೆದುಕೊಂಡಿದ್ದರು, ಅದನ್ನು ತೀರಿಸುವ ಸಲುವಾಗಿ ಟೈಪಿಂಗ್ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆ ಲಕ್ಷ್ಮೀ ಬಾಯಿ ಹೇಳಿಕೊಂಡಿದ್ದಾರೆ.
A superwoman for me. She lives in Sehore in MP and the youth have so much to learn from her. Not just speed, but the spirit and a lesson that no work is small and no age is big enough to learn and work. Pranam ! pic.twitter.com/n63IcpBRSH
— Virender Sehwag (@virendersehwag) June 12, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.